ದೇವರು ನನ್ನ ಕೈಬಿಡುವುದಿಲ್ಲ; ಸುಧಾಕರ್

D SUDAKAR D HYR
Published on

ಹಿರಿಯೂರು: ಸತ್ಯಕ್ಕೆ ತಡವಾಗಿ ಆದರೂ ಜಯ ಸಿಗುವುದು ಖಚಿತ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಉನ್ನತ ಸ್ಥಾನಮಾನ ಸಿಕ್ಕ ಸಂದರ್ಭ ಇಂತಹ ಆರೋಪಗಳನ್ನು ನನ್ನ ಬೆಳವಣಿಗೆ ಸಹಿಸಿದವರು ಮಾಡುತ್ತಿದ್ದರು ಎಂದರು.

ಈಗ ಒಂದು ಹೆಜ್ಜೆ ಮುಂದಿಟ್ಟು ಮತ್ತೊಬ್ಬರನ್ನು ಎತ್ತಿಕಟ್ಟಿದ್ದಾರೆ. ಯಾವುದೇ ತಪ್ಪು ಮಾಡದ ನನ್ನ ವಿರುದ್ಧ ಎಂತಹದ್ದೇ ಷಡ್ಯಂತರ ಮಾಡಿದರು ದೇವರನ್ನು ನಂಬಿರುವ ನನಗೆ ಸಮಸ್ಯೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾತಿ ನಿಂದನೆ ಮಾಡುವ ವ್ಯಕ್ತಿ ನಾನು ಆಗಿದ್ದರೆ ಪರಿಶಿಷ್ಟರೇ ಹೆಚ್ಚು ಇರುವ ಚಳ್ಳಕೆರೆ, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿತ್ತು ಎಂದು ಪ್ರಶ್ನೀಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net