

ಕಂಪ್ಲಿ: ಸಂಕಷ್ಟದಲ್ಲಿರುವವರನ್ನು ಯೇಸುಪ್ರಭು ರಕ್ಷಣೆ ಮಾಡುತ್ತಾನೆ ಎಂದು ಎಲ್.ಷಡ್ಡಾಯ್ ಚರ್ಚ್ ಪಾಧರ್ ರೆವೆರೆಂಡ್ ಪಾಲ್ ಪಂಪಾಪತಿ ಹೇಳಿದರು.
ಪಟ್ಟಣದ ಎಲ್.ಷಡ್ಡಾಯ್ ಚರ್ಚ್ ಆವರಣದಲ್ಲಿ ಬುಧವಾರ ಕ್ರಿಸ್‌ಮಸ್ ಸಮಾರಂಭ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಧವಿಲ್ಲದೆ ಎಲ್ಲರನ್ನು ಯೇಸು ಪ್ರೀತಿಸುತ್ತಾನೆ. ಕತ್ತಲಲ್ಲಿ ಇರುವವರಿಗೆ ಬೆಳಕು ತೋರಲೆಂದು ಯೇಸುಕ್ರಿಸ್ತ ಜನಿಸಿದ್ದಾನೆ ಎಂದರು. ಕ್ರಿಸ್‌ಮಸ್ ಅಂಗವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಬಡವರಿಗೆ ವಸ್ತ್ರದಾನ ಮಾಡಲಾಯಿತು. ಯೇಸು ಕ್ರಿಸ್ತನ ಜನನ ಹಾಗೂ ಸಂದೇಶದ ಹಾಡು ಹಾಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಸಕ ಜೆ.ಎನ್.ಗಣೇಶ, ಪ್ರಮುಖರಾದ ಬೂದಗುಂಪಿ ಹುಸೇನ್‌ಸಾಬ್, ಕೆ.ಎಸ್.ಚಾಂದ್‌ಬಾಷಾ, ಕೆ.ಷಣ್ಮುಖಪ್ಪ, ಕೆ.ಮೆಹಬೂಬ್, ಎಣ್ಣೆ ವೆಂಕಟೇಶ ಶ್ರೇಷ್ಠಿ, ಆಟೋ ವಿರುಪಾಕ್ಷಿ, ಸೋಮಣ್ಣ, ಗಣೇಶ, ಭೀಮೇಶ, ದೇವಲಾಪುರ ಮಾರೆಪ್ಪ, ಮೌಲಪ್ಪ, ಮೆಟ್ರಿ ನಾಗರಾಜ, ರತ್ನಮ್ಮ, ಹುಲಿಗೆಮ್ಮ ಇತರರಿದ್ದರು.
ಸಹಾಯಮಾತೆ ದೇವಾಲಯ: ಸಕ್ಕರೆ ಕಾರ್ಖಾನೆ ಪ್ರದೇಶದ ಸಹಾಯಮಾತೆ ದೇವಾಲಯದ ಆವರಣದಲ್ಲಿ ಕ್ರಿಸ್‌ಮಸ್ ನಿಮಿತ್ತ ಬಾಲ ಯೇಸುವಿನ ಜನನ ವೃತ್ತಾಂತ ಸಾರುವ ಕ್ರಿಬ್ಸ್ (ಗೋದಲಿ)ನಿರ್ಮಿಸಲಾಗಿತ್ತು. ಪ್ರಾರ್ಥನೆ, ಯೇಸುಕ್ರಿಸ್ತನ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫಾದರ್ ಸುನೀಲ್ ದಂಡಾವತಿ ಮಾತನಾಡಿ, ಕ್ರಿಸ್‌ಮಸ್ ಈ ಲೋಕಕ್ಕೆ ನೀಡಿದ ಶಾಂತಿ, ನೆಮ್ಮದಿಯ ಜೀವನ ಸರ್ವರಿಗೂ ದೊರಕಲಿ ಎಂದು ಹಾರೈಸಿದರು. ಬಳ್ಳಾರಿಯ ಫಾದರ್ ಆಂಟೋನಿ, ಸಿಸ್ಟರ್ ಬೆನ್ನಿ, ಸಿಸ್ಟರ್ ಓಲೀವಿಯಾ, ಪಾಲನಾಸಮಿತಿ ಸದಸ್ಯರಿದ್ದರು.