

ಸವಣೂರ: ಸನಾತನ ಹಿಂದು ಧರ್ಮ ಸ್ಥಾಪನೆಗೆ ಮುನ್ನುಡಿ ಬರೆದು ಲೋಕದ ಅಂಕು-ಡೊಂಕು ತಿದ್ದಲು ಮುಂದಾದ ಭಗವಂತ ಜ್ಯಾತ್ಯತೀತವಾಗಿರುವುದು ಹೆಮ್ಮೆಯ ಸಂಗತಿ ಎಂದು ಯಾದವ ಸಂಘದ ಪ್ರಮುಖ ಪಂಚಪ್ಪ ತೊಲಕೊಪ್ಪದ ಹೇಳಿದರು.
ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ಯಾದವ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುದ್ದು ಮಕ್ಕಳನ್ನು ಕೃಷ್ಣನ ವೇಷಭೂಷಣದಲ್ಲಿ ಕಾಣುವ ಸರ್ವಧರ್ಮದ ಜನತೆಗೆ ಯಾದವ ಸಮಾಜ ಕೃತಜ್ಞವಾಗಿದೆ. ಮಕ್ಕಳು ಉತ್ತಮ ಸಂಸ್ಕಾರ ಕಲಿಯಲು ಪಾಲಕರು ಉತ್ತಮ ಸಾಮಾಜಿಕ ಚಿಂತನೆ ಹೊಂದುವುದು ಅಗತ್ಯವಾಗಿದೆ ಎಂದರು.
ಪ್ರಮುಖರಾದ ಕರಬಸಪ್ಪ ಪಾಟೀಲ, ಉಮೇಶ ದಾಸರ, ರಾಜು ಹಲವಾಲ, ರಾಮಣ್ಣ ಗೊಲ್ಲರ, ಹನುಮಂತ ದಾಸರ, ಮಂಜು ಕಿತ್ತೂರು, ನಾಗಪ್ಪ ಎಲಿಗಾರ, ಚಂದ್ರಶೇಖರ ದಾಸರ, ಎಲ್ಲಪ್ಪ ತೊಲಕೊಪ್ಪದ, ಕೃಷ್ಣ ದಾಸರ, ನಿಂಗಪ್ಪ ಹಲವಾಲ, ಚಂದ್ರು ಹಲವಾಲ, ನಿಂಗಪ್ಪ ದಾಸರ, ನಿಂಗಪ್ಪ ತೊಲಕೋಪ್ಪದ, ಮಾಲತೇಶ ದಾಸರ, ಇತರರು ಪಾಲ್ಗೊಂಡಿದ್ದರು. ಬಳಿಕ ಗ್ರಾಮಸ್ಥರು ಏರ್ಪಡಿಸಿದ್ದ ಅನ್ನಸಂರ್ಪಣೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಕೃಷ್ಣ ಜನ್ಮಾಷ್ಟಮಿ ನಾಳೆ: ಹಾವೇರಿಯಲ್ಲಿ ಸೆ. 11ರಂದು ಏರ್ಪಡಿಸಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಯಾದವ ಸಂಘದ ಪ್ರಮುಖ ಪಂಚಪ್ಪ ತೊಲಕೋಪ್ಪದ ತಿಳಿಸಿದರು.