

ಕಕ್ಕೇರಿ: ಖಾನಾಪುರ ತಾಲೂಕಿನ ಕಕ್ಕೇರಿ, ಲಿಂಗನಮಠ, ಚುಂಚವಾಡ, ರಾಮಾಪುರ, ಗುಂಡಳ್ಳಿ, ಭೂರನಕಿ, ದಡ್ಡಿ, ಗೋಳಿಹಳ್ಳಿ, ಬೀಡಿ, ನಂದಗಡ ಸೇರಿ ವಿವಿಧ ಗ್ರಾಮಗಳಲ್ಲಿ ಶನಿವಾರ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಆಚರಿಸಿದರು.
ಹೊಸ ಬಟ್ಟೆ ತೊಟ್ಟು, ತಲೆಯ ಮೇಲೆ ವಸ್ತ್ರ,. ಟೋಪಿ, ಹಾಕಿಕೊಂಡು ಸಾಲು ಸಾಲಾಗಿ ಓಣಿಗಳಲ್ಲಿ ಸಂಚರಿಸಿ ದೇವರ ಘೋಷಣೆ ಹಾಕುತ್ತ ಈದ್ಗಾದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಇಸ್ಲಾಂ ಧರ್ಮಗುರು ಇಂಜುಮಾಮುಲ್ ಹಕ್ ಬೋಧನೆ ಮಾಡಿದರು. ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ರಿಯಾಜ್‌ಮ್ಮದ್ ಪಟೇಲ್ ಮಾತನಾಡಿ, ದೇವರು ಒಬ್ಬನೇ ನಾಮ ಹಲವು ಎಂಬಂತೆ ನಾವೆಲ್ಲರೂ ಒಂದೇ ಕುಟುಂಬಸ್ಥರು ಎಂದು ತಿಳಿದುಕೊಂಡಲ್ಲಿ ಸುಗಮವಾಗಿ ಜೀವನ ಸಾಗುತ್ತದೆ ಎಂದರು.
ಮುಖಂಡರಾದ ಅಷ್ಪಕ್ ಅಹಮ್ಮದ್ ಪಟೇಲ್, ಇಲಿಯಾಸ್ ಪಟೇಲ್, ಆಜಾದ್ ಪಟೇಲ್, ಜಕ್ಕಿಅಮ್ಮದ್ ರಾಯಚೂರು, ಡಾ. ನಜೀರ ವೀರಾಪುರ, ಡಾ .ಎಚ್ ಎಚ್. ಚೌಧರಿ, ಇಮ್ತಿಯಾಜ್ ಜುಂಜವಾಡ, ದಿಲಾವರ್ ಮುಜಾವರ್ ಇತರರಿದ್ದರು.