ದೇವರು ಉತ್ತಮ ಮಳೆ ಕರುಣಿಸಲಿ

MUSLIM
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
Published on

ಸಿರಗುಪ್ಪ: ತಾಲೂಕಿನ ಸಿರಗುಪ್ಪ ಮತ್ತು ತೆಕ್ಕಲಕೋಟೆಯಲ್ಲಿ ಮುಸ್ಲಿಮರು ಮಳೆಗಾಗಿ ಪ್ರಾರ್ಥಿಸಿ ಈದ್ಗಾ ಮೈದಾನದಲ್ಲಿ ಶನಿವಾರ ನಮಾಜ್ ಮಾಡಿದರು.

ಪ್ರಾರ್ಥನೆ

ಮುಂಗಾರು ಮಳೆ ಪ್ರಾರಂಭವಾಗಿ 2 ತಿಂಗಳು ಕಳೆದಿದ್ದರೂ ತಾಲೂಕಿನಲ್ಲಿ ವಾಡಿಕೆ ಮಳೆ ಬಾರದೇ ಇರುವುದರಿಂದ ಸಿರಗುಪ್ಪ ನಗರದ ಈದ್ಗಾ ಮೈದಾನದಲ್ಲಿ ಹಾಗೂ ತೆಕ್ಕಲಕೋಟೆಯಲ್ಲಿ ಮುಸ್ಲಿಮರು ಮಳೆಗಾಗಿ ಪ್ರಾರ್ಥಿಸಿ ನಮಾಜ್ ಸಲ್ಲಿಸಿ ಮಳೆ ಬರುವಂತೆ ಪ್ರಾರ್ಥನೆ ಮಾಡಿದರು.

ತೆಕ್ಕಲಕೋಟೆಯಲ್ಲಿ ಖಾಜಿ ಇಮಾಮ್ ಮಸ್ತೂರ್ ಅಲಿ ಮಾತನಾಡಿ, ಮಳೆಗಾಲ ಆರಂಭವಾಗಿ 2 ತಿಂಗಳು ಮುಗಿಯುತ್ತಿದ್ದರೂ ತಾಲೂಕಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ನದಿ, ಹಳ್ಳ, ಕೊಳ್ಳಗಳು ಬತ್ತಿ ಹೋಗಿದ್ದು, ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಉತ್ತಮವಾದ ಮಳೆ ಕರುಣಿಸುವಂತೆ ದೇವರನ್ನು ಪ್ರಾರ್ಥಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net