ದೇವರ ಮುಂದೆ ಹಚ್ಚಿದ ದೀಪದಿಂದ ಮನೆ ಸುಟ್ಟು ಕರಕಲು

Crime Logo
Published on

ಹಾವೇರಿ: ಮನೆಯ ದೇವರ ಮುಂದೆ ಹಚ್ಚಿದ ದೀಪದಿಂದ ಹತ್ತಿಕೊಂಡ ಬೆಂಕಿಯಿಂದ ಇಡೀ ಮನೆ ಸುಟ್ಟು ಕರಕಲಾದ ಟನೆ ತಾಲೂಕಿನ ಅಕ್ಕೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕರಬಸಪ್ಪ ಇರಪಣ್ಣ ತೋಟಿಗೇರ ಎಂಬುವರ ಮನೆ ಸುಟ್ಟಿರುವುದು.

ಇವರು ಬೆಳಗ್ಗೆ ಮನೆಯಲ್ಲಿ ದೇವರ ಪೂಜೆ ಮಾಡಿ ದೀಪ ಹಚ್ಚಿಟ್ಟಿದ್ದರು. ಕುಟುಂಬದವರು ಕೂಲಿ ಕೆಲಸಕ್ಕಾಗಿ ತೆರಳಿದ್ದರು. ಮಕ್ಕಳು ಶಾಲೆಗೆ ತೆರಳಿದ್ದರು. ಈ ಸಮಯದಲ್ಲಿ ಹತ್ತಿಕೊಂಡ ಬೆಂಕಿಯಿದ್ದ ಸಂರ್ಪೂಣ ಮನೆ ಸುಟ್ಟು ಕರಕಲಾಗಿದೆ.

ಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠಪತಿ, ಗ್ರಾಪಂ ಸದಸ್ಯ ಹರೀಶ ಮಾಗಡಿಮಠ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕರಬಸಪ್ಪ ತೋಟಿಗೇರ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರಾದ ಮುತ್ತಣ್ಣ ಬರಡಿ, ಯಲ್ಲನಗೌಡ ಮರಿಗೌಡ್ರ, ಮಹಾದೇವಪ್ಪ ಬರಡಿ, ಉಮೇಶ ಹೊಸಮನಿ, ಈರಣ್ಣ ತೋಟಿಗೇರ ಮತ್ತಿತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net