ಗ್ರಾಹಕರೆ ಗೋಬಿ ಬ್ಯಾನ್​ ಆಗಿಲ್ಲ..; ಆದ್ರೆ ಕೃತಕ ಬಣ್ಣ ಬಳಸುವಂತಿಲ್ಲ..

gobi
Published on

ಬೆಂಗಳೂರು: ಗೋಬಿ ಮಂಚೂರಿಯನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ಚೀನೀ ಅಡುಗೆ ಎಲ್ಲರ ಅಭಿರುಚಿಗೆ ತಕ್ಕಂತೆ ಇದೆ. ಇದು ಸಖತ್​ ಫೆಮಸ್​ ಕೂಡಾ ಆಗಿದೆ. ಆದರೆ ಇನ್ಮುಂದೆ ಗೋಬಿ ಮಂಚೂರಿ ಮಾರಾಟ ಮಾಡುವಂತೆ ಇಲ್ಲ. ಗೋಬಿ ಬ್ಯಾನ್​ ಎನ್ನುವ ಸುದ್ದಿ ವೈರಲ್​ ಆಗುತ್ತಿದೆ. ಆದರೆ ಇದರ ಅಸಲಿ ಕಥೆಯೆ ಬೇರೆ ಇದೆ.

ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ. ಕ್ಯಾಂಡಿ ಬ್ಯಾನ್ ಮಾರಾಟ ಮಾಡಿದರೇ ಮತ್ತು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೃತಕ ಬಣ್ಣ ಬಳಸಿ ಮಾಡಿದ ಗೋಬಿ ಬ್ಯಾನ್​ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಕೆಲವು ದಿನಗಳ ಹಿಂದೆ ಹೇಳಿದ್ದಾರೆ. ಈ ಸುದ್ದಿ ಬಿತ್ತರವಾಗುತ್ತಿದ್ದ ಬೆನ್ನಲ್ಲೆ ಕೆಲವು ಇನ್ಮುಂದೆ ಗೋಬಿ ಸಿಗಲ್ಲ, ಮಾರಾಟ ಮಾಡುವಂತೆ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.  ಈ ಸುದ್ದಿ ಹಿಂದೆ ಇರುವ ಅಸಲಿ ಸತ್ಯ ಇಂತಿದೆ...

ಗೋಬಿ ಮಾರಾಟ ಮಾಡುವುದನ್ನು ಬ್ಯಾನ್ ಎಂದು ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ​ಹೇಳಿಲ್ಲ. ಗೋಬಿ ಮಾಡುವಾಗ ಕೃತಕ ಬಣ್ಣವನ್ನು ಬಳಕೆ ಮಾಡುವುದು ಮತ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡುವ  ಬಣ್ಣಗಳನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ ಎಂದು ಹೇಳಲಾಗಿದೆ.

ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್‌’ ರಾಸಾಯನಿಕ ಅಂಶ ಪತ್ತೆಯಾಗಿದೆ.ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.  ಬಣ್ಣ ಬರಲು ಕೆಮಿಕಲ್​ ಬಳಸಿ ಗೋಬಿ ಮಾಡುವಂತೆ ಇಲ್ಲ. ಕಲರ್​ ಬಳಸಿ ಮಾಡುವ ಗೋಬಿ ಬ್ಯಾನ್​ ಮಾಡಲಾಗುತ್ತದೆ. ಕೃತಕವಾದ ಬಣ್ಣವನ್ನು ಮಾರಾಟ ಹಾಗೂ ಬಳಕೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈ ಗೊಳ್ಳಲಾಗುತ್ತದೆ.

ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ನಿಷೇಧ ಉಲ್ಲಂಘಿಸಿದಲ್ಲಿ 7 ವರ್ಷಗಳವರೆಗೆ ಜೈಲು ಹಾಗು 10 ಲಕ್ಷದವರೆಗೆ ದಂಡ ವಿಧಿಸಲಾಗುವುದು.

ಈ ಕೃತಕ ಬಣ್ಣಗಳನ್ನು ಬಳಸುವ ತಿಂಡಿ ತಿನಿಸುಗಳನ್ನು ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಕಾನ್ಸರ್’ಗೆ ತುತ್ತಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರೂ ಸಹ ಇಂತಹವುಗಳ ಬಗ್ಗೆ ಎಚ್ಚರ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net