ರಾಮಾಪುರ, ಹೊಸವಾಳದಲ್ಲಿ ಆಡು- ಟಗರು ಕಳ್ಳತನ

Crime
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಹೊಸವಾಳ ಮತ್ತು ರಾಮಾಪುರ ಗ್ರಾಮಗಳಲ್ಲಿ ಕೆಲ ದಿನಗಳಿಂದ ಆಡು, ಕುರಿಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿರುವ ತಂಡ, ಬೈಕ್ ಮೇಲೆ ಟಗರುಗಳನ್ನು ಹೊತ್ತೊಯ್ಯುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗುವ ಕೆಲವರು ಮನೆ ಮುಂದೆ ಕಟ್ಟಿರುವ ಕುರಿ, ಟಗರು, ಆಡುಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಹೊಸವಾಳ ಗ್ರಾಮದ ವಾಸು ಹುಲಿಕೇರಿ ಎಂಬುವರ ಆಡು, ಅದೇ ಗ್ರಾಮದ ದಾದಾಪೀರ ದೊಡ್ಡಮನಿ ಅವರ ಮನೆಯ ಮುಂದೆ ಕಟ್ಟಿದ್ದ ಟಗರನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿರುವ ಗ್ರಾಮಸ್ಥರು ಕಳ್ಳರ ಪತ್ತೆಗೆ ಮನವಿ ಮಾಡಿದ್ದಾರೆ. ಹಾಡಹಗಲೇ ಬೈಕ್ ಮೇಲೆ ಟಗರು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಬೇಲೂರಿನಲ್ಲಿರುವ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ಮಾಲೀಕರು ಸಿಸಿ ಕ್ಯಾಮರಾದ ದೃಶ್ಯಗಳೊಂದಿಗೆ ಆರೋಪಿಗಳ ಸುಳಿವು ನೀಡಿ ದೂರು ಕೊಟ್ಟು ವಾರವಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಗ್ರಾಮೀಣ ಠಾಣೆಯ ಹಿರಿಯ ಅಧಿಕಾರಿಗಳೇ ರಾಜಿ ಸಂಧಾನದ ಮೂಲಕ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net