

ಬೇಲೂರು: ವಿದ್ಯುತ್ ಪ್ರವಹಿಸಿ ಎರಡು ಮೇಕೆಗಳು ಸಾವನಪ್ಪಿರುವ ಘಟನೆ ಪಟ್ಟಣದ ಜೆಪಿ ನಗರದಲ್ಲಿರುವ ಆರ್‌ವಿ ಕಲ್ಯಾಣ ಮಂಟಪದ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಪಟ್ಟಣದ ಮೂಡಿಗೆರೆ-ಬೇಲೂರು ರಸ್ತೆಯ ಜೆಪಿ ನಗರದಲ್ಲಿರುವ ಮುಖ್ಯರಸ್ತೆಯ ಆರ್‌ವಿ ಕಲ್ಯಾಣ ಮಂಟಪದ ಮುಂಭಾಗದ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಮೀಪದಲ್ಲೇ ಮಳೆ ನೀರು ನಿಂತಿರುವುದರಿಂದ ವಿದ್ಯುತ್ ಪ್ರವಹಿಸುತಿತ್ತು. ಇದೇ ಸಂದರ್ಭ ಜೆಪಿ ನಗರದ ಅಮ್ಜದ್ ಎಂಬುವವರಿಗೆ ಸೇರಿದ ಎರಡು ಮೇಕೆಗಳು ಟ್ರಾನ್ಸ್ ಫಾರ್ಮರ್ ಹತ್ತಿರ ತೆರಳಿವೆ. ಈ ಸಂದರ್ಭ ವಿದ್ಯುತ್ ಪ್ರವಹಿಸಿ ಎರಡು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಈ ಟ್ರಾನ್ಸ್ ಫಾರ್ಮರ್ ಅಕ್ಕಪಕ್ಕ ಸಾರ್ವಜನಿಕರು, ವಿದ್ಯಾರ್ಥಿಗಳು ನಿತ್ಯ ಹೆಚ್ಚಾಗಿ ಓಡಾಡುತ್ತಾರೆ ಸೆಸ್ಕ್ ಇಲಾಖೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.