ಕೊಟ್ಟಿಗೆಮನೆ ಬೀಗ ಮುರಿದು ಮೇಕೆ ಕಳವು

Published on

ದಾಬಸ್​ಪೇಟೆ: ನೆಲಮಂಗಲ ತಾಲೂಕಿನ ನರಸೀಪುರದಲ್ಲಿ ಶನಿವಾರ ರಾತ್ರಿ ಕೊಟ್ಟಿಗೆಯ ಬೀಗ ಮುರಿದ ಕಳ್ಳರು 3 ಮೇಕೆ ಹಾಗೂ ಟ್ರಾ$್ಯಕ್ಟರ್​ ಶೆಡ್​ನಲ್ಲಿ ಇಟ್ಟಿದ್ದ ಸುಮಾರು 50 ಲೀಟರ್​ ಡೀಸೆಲ್​ ಕಳವು ಮಾಡಿದ್ದಾರೆ. ಗ್ರಾಪಂ ಮಾಜಿ ಸದಸ್ಯ ಎನ್​.ಜಿ.ರಮೇಶ್​ ಅವರ ಮನೆಯಲ್ಲಿ ಕಳವು ಮಾಡಲಾಗಿದೆ. ದೇವರ ಕಾರ್ಯಕ್ಕೆಂದು 4 ಮೇಕೆ ಸಾಕಿದ್ದೆವು. ಎಂದಿನಂತೆ ಕೊಟ್ಟಿಗೆಯಲ್ಲಿ 2 ಮೇಕೆಗಳನ್ನು ಕಟ್ಟಿ, ಎರನ್ನು ಬಿಟ್ಟು ಬೀಗ ಹಾಕಿದ್ದೆವು. ಮುಂಜಾನೆ 4ರಲ್ಲಿ ಎಚ್ಚರಗೊಂಡು ನೋಡಿದಾಗ ಮೂರು ಮೇಕೆಗಳು ಇರಲಿಲ್ಲ ಎಂದು ಮಾಲೀಕ ರಮೇಶ್​ ತಿಳಿಸಿದ್ದಾರೆ. ಟ್ರ್ಯಾಕ್ಟರ್​ ಮತ್ತು ಜೆಸಿಬಿ ವಾಹನಗಳಿಗೆಂದು 50 ಲೀಟರ್​ ಡೀಸೆಲ್​ ತಂದು ಇಟುದ್ದು, ಅದನ್ನು ಹೊತ್ತೊಯ್ದಿದ್ದಾರೆ. ಟನೆ ದೃಶ್ಯ ನೆರೆ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದಾಬಸ್​ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಗಿ ಚೀಲ ಕಳವು!: ಇಮಚೇನಹಳ್ಳಿಯಲ್ಲಿ ವೀರಭದ್ರ ಅವರ ಮನೆಯ ಮುಂದೆ ಇರಿಸಿದ್ದ 6 ಚೀಲ ರಾಗಿಯನ್ನು ಕಳ್ಳರು ಕಳವು ಮಾಡಿದ್ದಾರೆ. 50 ಕೆಜಿ ತೂಗುವ ಪ್ಲಾಸ್ಟಿಕ್​ ಚೀಲಗಳಲ್ಲಿ ತೂಕ ಮಾಡದೆ ರಾಗಿಯನ್ನು ಆರು ಚೀಲಗಳಲ್ಲಿ ತುಂಬಿ ಇಟ್ಟಿದ್ದರು. ಕೆಲ ದಿನಗಳ ಹಿಂದೆ ವೀರಭದ್ರ ಅವರ ಅಣ್ಣ ವಿಜಯ್​ ಕುಮಾರ್​ ಮನೆಯಲ್ಲಿ ಹಂಡೆಯನ್ನು ಕಳವು ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net