ಸಹಕಾರಿ ತತ್ವದಡಿ ರೈತ ಉತ್ಪಾದಕರ ಕಂಪನಿ ಕೆಲಸ: ಸಹಾಯಕ ನಿರ್ದೇಶಕ ಡಾ.ಸಿದ್ದರಾಮು ಮಾಹಿತಿ

Com
Published on

ಮಂಡ್ಯ: ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಹಕಾರಿ ತತ್ವದಡಿ ಮಂಡ್ಯ ಕುರಿ ಮತ್ತು ಮೇಕೆ ಸಾಕಾಣಿಕಾ ರೈತ ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಲಾಗಿದೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಸಿದ್ದರಾಮು ತಿಳಿಸಿದರು.
ನಗರದ ನೂರಡಿ ರಸ್ತೆಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕಾ ರೈತ ಉತ್ಪಾದಕರ ಕಂಪನಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಯಾವುದೇ ಉತ್ಪಾದನೆಯನ್ನು ವ್ಯವಹಾರದ ರೀತಿಯಲ್ಲಿ ನಡೆಸುವಂತಹ ಕಂಪನಿ. ರೈತರಿಂದಲೇ ಷೇರನ್ನು ಸಂಗ್ರಹಿಸಿ ಜತೆಗೆ ಸರ್ಕಾರದ ಅನುದಾನವನ್ನು ಬಳಸಿಕೊಂಡು ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.
ರೈತರ ಉತ್ಪನ್ನಗಳಿಗೆ ಸೀಮಿತಗೊಳಿಸಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು. ಸಹಕಾರಿ ತತ್ವದಡಿ ಈ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆದು ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರಿಗೂ ತಲುಪಿಸುವ ಕೆಲಸ ಮಾಡುತ್ತದೆ ಎಂದರು.
ಪಶುಪಾಲನಾ ಇಲಾಖೆ ಮುಖ್ಯವೈದ್ಯಾಧಿಕಾರಿ ಡಾ.ತ್ರಿನೇಶ್, ಕುರಿ ಮತ್ತು ಮೇಕೆ ಸಾಕಾಣಿಕಾ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಎಸ್.ಎನ್.ಮಹೇಶ್, ಮಂಜುನಾಥ್, ಆನಂದ್, ಶಿವರಾಮು, ವಿನೋದ್, ರವಿ, ಕುಮಾರ್, ಅಪ್ಪಾಜಿ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net