ಚಿರತೆ ದಾಳಿಗೆ ಮೇಕೆ, ನಾಯಿ ಬಲಿ

namibia cheetahs-in-kuno-national-park-turning-ecological-wrongt
Published on

ಚಾಮರಾಜನಗರ: ತಾಲೂಕಿನ ಕೆ.ಗುಂಡಾಪುರ ಗ್ರಾಮದ ತೋಟದ ಮನೆಯ ಕೊಟ್ಟಿಗೆಯಲ್ಲಿ ಗುರುವಾರ ಚಿರತೆ ದಾಳಿಗೆ ಮೇಕೆ ಹಾಗೂ ಸಾಕು ನಾಯಿ ಬಲಿಯಾಗಿದೆ.

ಗ್ರಾಮದ ಪರಮೇಶ್ ಎಂಬುವವರು ಪಟ್ಟಣದ ಹೊರವಲಯದಲ್ಲಿರುವ ಜಮೀನಿನ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿ ಹಾಕಿದ್ದರು. ಬೆಳಗಿನ ಜಾವ 5 ರ ವೇಳೆಯಲ್ಲಿ ಕೊಟ್ಟಿಗೆಗೆ ಲಗ್ಗೆ ಇಟ್ಟ ಚಿರತೆ, ಮೇಕೆಯೊಂದನ್ನು ಕೊಂದು ಹಾಕಿದೆ. ಜತೆಗೆ ಮನೆಯ ಆವರಣದಲ್ಲಿದ್ದ ಸಾಕು ನಾಯಿಯನ್ನು ಸಹ ಸಾಯಿಸಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net