ಗೋಲ್‌ಕೀಪರ್ ಅಗಿ ಶ್ರಾವ್ಯ ದೇವಯ್ಯ ಆಯ್ಕೆ

1.npk-4
ಶ್ರಾವ್ಯ ದೇವಯ್ಯ.
Published on

ನಾಪೋಕ್ಲು: ಕೊಡಗಿನ ಶ್ರಾವ್ಯಾ ದೇವಯ್ಯ ರಾಷ್ಟ್ರೀಯ ಮಹಿಳಾ ಜೂನಿಯರ್ ಹಾಕಿ ಕರ್ನಾಟಕ ತಂಡದ ಗೋಲ್‌ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಆಗಸ್ಟ್ 1ರಿಂದ 12ರವರೆಗೆ ನಡೆಯಲಿರುವ ರಾಷ್ಟ್ರೀಯ ಮಹಿಳಾ ಜೂನಿಯರ್ ಕರ್ನಾಟಕ ಹಾಕಿ ತಂಡದ ಗೋಲ್ ಕೀಪರ್ ಆಗಿ ಕೊಡಗಿ ನಾಪೋಕ್ಲು ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ಶ್ರಾವ್ಯಾ ದೇವಯ್ಯ ಆಯ್ಕೆ ಆಗಿರುವುದು ಕೊಡಗಿಗೆ ಹೆಮ್ಮೆಯ ವಿಷಯ.

ತಮಿಳುನಾಡಿನ ತಿರುಪೂರ್ ಜಿವಿಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಮುಂಬೈಯ ಎನ್‌ಸಿಒಇ ತಂಡದಲ್ಲಿ ತರಬೇತಿ ಪಡೆಯುತ್ತಿದ್ದು ಶ್ರಾವ್ಯಾ ದೇವಯ್ಯ ಕುಂಜಿಲ ಗ್ರಾಮದ ವಾಟೆಕಾಡು ನಿವಾಸಿ ದೇವಯ್ಯ ಹಾಗೂ ಚಿತ್ರಾ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net