ಕಠಿಣ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ

Goal can be achieved with hard work
Goal can be achieved with hard work
Published on

ತೇರದಾಳ: ಮುಗ್ಧ ಮನಸ್ಸುಗಳನ್ನು ಶಿಕ್ಷಣವೆಂಬ ಉಳಿಯಿಂದ ಕೆತ್ತಿ ಶಿಲೆಯನ್ನಾಗಿಸುವ ಗುರು ಶಾಲೆಯಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಉತ್ತಮ ಎನಿಸಿದ್ದಾನೆ ಎಂದು ಹಿರಿಯರಾದ ಮಗಯ್ಯ ಹಿರೇಮಠ ಹೇಳಿದರು.

ತಾಲೂಕಿನ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸತತ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಾಧನೆಯ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಡಾ.ಸುರೇಶ ಸಲಬನ್ನವರ, ಪ್ರಾಚಾರ್ಯ ಎಂ.ಎಸ್.ಮೂಡಸಿ, ಉಪನ್ಯಾಸಕ ಪ್ರವೀಣ ಬುದ್ನಿ ಮಾತನಾಡಿದರು.

ಜಕ್ಕಪ್ಪ ಜಲಪೂರ, ಸಂಸ್ಥೆ ಅಧ್ಯಕ್ಷ ಮಹಾಲಿಂಗ ಶೇಗುಣಸಿ, ಮುಖ್ಯಶಿಕ್ಷಕ ಸಿದ್ದು ಕಮದಿನ್ನಿ ಇದ್ದರು.

ದ್ವಿತೀಯ ವಿದ್ಯಾರ್ಥಿಗಳಿಗೆ ದೀಪದಾನದ ಜತೆಗೆ ಉಡುಗೊರೆ ಕೊಡುವುದರ ಮೂಲಕ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net