1.18 ಲಕ್ಷ ಮೌಲ್ಯದ ಗೋವಾ ಮದ್ಯ ವಶ

Illegal-liquor-seized
Published on

ಕಾರವಾರ:ಗೋವಾದಿಂದ ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 1.18 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಸಾರಾಯಿಯನ್ನು ಶಹರ ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಗೋವಾದಿಂದ ಯಾವುದೇ ಪರವಾನಗಿ ಇಲ್ಲದೇ ಅಂಕೋಲಾ ಕಡೆಗೆ ಸಾಗಿಸುತ್ತಿದ್ದ ವಾಹನವನ್ನು ನಗರದ ಕೋಡಿಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಡೆದು ಪರಿಶೀಲನೆ ನಡೆಸಿದಾಗ ಸಾರಾಯಿ ಪತ್ತೆಯಾಗಿದೆ.

22 ಚೀಲಗಳಲ್ಲಿ 75,600 ರೂ. ಮೌಲ್ಯದ 504 ಬಾಟಲಿ ಗೋವಾ ಫೆನ್ನಿ ಹಾಗೂ 43,200 ರೂ. ಮೌಲ್ಯದ 288 ವಿಸ್ಕಿ ಬಾಟಲಿಗಳನ್ನು ಸಾಗಿಸಲಾಗುತ್ತಿತ್ತು. ಒಟ್ಟಾರೆ 594 ಲೀಟರ್‌ ಸಾರಾಯಿ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಅಂಕೋಲಾ ಅವರ್ಸಾದ ಮಿಥುನ್ ನಾರಾಯಣ ನಾಯ್ಕ, ಗುಳ್ಳಾಪುರದ ಪ್ರಸಾದ ರಾಮಾ ದೇಸಾಯಿ, ಕಾರವಾರ ಅಸ್ನೋಟಿಯ ಸಂತೋಷ ಅಶೋಕ ಠಾಕರಕರ್ ವಿರುದ್ಧ ಪಿಎಸ್‌ಐ ನೇಹಾಲ್ ಖಾನ್ ಪ್ರಕರಣ ದಾಖಲಿಸಿಕೊಂಡು ನೋಟಿಸ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net