ಗೋವಾ ಮದ್ಯ ವಶ, ಚಾಲಕನ ಬಂಧನ

Arrest
Published on

ಖಾನಾಪುರ: ತಾಲೂಕಿನ ಕಣಕುಂಬಿಯ ಕರ್ನಾಟಕ-ಗೋವಾ ಚೆಕ್‌ಪೋಸ್ಟ್ ಬಳಿ ಗೂಡ್ಸ್ ವಾಹನದಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ಚಾಲಕನನ್ನು ಗುರುವಾರ ಬಂಧಿಸಿರುವ ಅಬಕಾರಿ ಪೊಲೀಸರು, 97.5 ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ಮಚ್ಛೆ ನಿವಾಸಿ ಶಂಕರ ಮೋಹನ ಗೋಮಾನಚ ಬಂಧಿತ. 750 ಎಂಎಲ್ ಅಳತೆಯ 132 ಮತ್ತು 180 ಎಂಎಲ್ ಅಳತೆಯ 192 ಮದ್ಯದ ಬಾಟಲ್, ಗೂಡ್ಸ್ ವಾಹನ ಸೇರಿ ಒಟ್ಟು 3.25 ಲಕ್ಷ ರೂ.ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ.

ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಬೆಳಗಾವಿ ಉಪ ವಿಭಾಗದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net