ಗಾಜನೂರು ಅಗ್ರಹಾರದಲ್ಲಿ ಗೋವಾ ಮದ್ಯ ಜಪ್ತಿ

goa liquor
ಗಾಜನೂರು ಅಗ್ರಹಾರದ ಮನೆಯಲ್ಲಿ ಸಂಗ್ರಹಿಸಿದ್ದ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿ ವ್ಯಕ್ತಿಯನ್ನು ಬಂಧಿಸಿದರು.
Published on

ಶಿವಮೊಗ್ಗ: ತಾಲೂಕಿನ ಗಾಜನೂರು ಅಗ್ರಹಾರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗೋವಾದ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿ, ವ್ಯಕ್ತಿಯನ್ನು ಬಂಧಿಸಿದ್ದಾರೆ.

ಗಾಜನೂರು ಅಗ್ರಹಾರ ಗ್ರಾಮದ ರಾಜಣ್ಣ ಬಂಧಿತ. ಈತ ಮನೆಯಲ್ಲೇ ಗೋವಾದ ಮದ್ಯವನ್ನು ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುಮಿತಾ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ 7.100 ಲೀ ಗೋವಾ ಮದ್ಯ ಜಪ್ತಿ ಮಾಡಲಾಗಿದೆ.
ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು ಕಾರ್ಯಾಚರಣೆಯಲ್ಲಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ, ಉಪನಿರೀಕ್ಷಕ ಚಂದ್ರಪ್ಪ, ಮುಖ್ಯಪೇದೆ ಕೆಂಪರಾಮ ಹಾಗೂ ರಕ್ಷಕರಾದ ನಾಗಪ್ಪ ಶೀರೋಳ್, ನಾಗಪ್ಪ, ಎಚ್.ರವಿ ಮತ್ತು ವಾಹನ ಚಾಲಕ ಎಂ.ನ್ಯಾನರಾಜ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net