

ಖಾನಾಪುರ: ಗೋವಾ ರಾಜ್ಯದಿಂದ ಲಾರಿಯಲ್ಲಿ ಬಟ್ಟಿ ಮದ್ಯ ಸಾಗಿಸುತ್ತಿದ್ದ ಚಾಲಕನನ್ನು ಖಾನಾಪುರದ ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದು, ಮದ್ಯ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆದಿದ್ದಾರೆ.
ಗೋವಾ ರಾಜ್ಯದ ನಿವಾಸಿ ಸೂರಜ್ ಸಾಂಬರೇಕರ ಬಂಧಿತ ಚಾಲಕ. ಕಣಕುಂಬಿ ಸಮೀಪದ ಚೆಕ್‌ಪೋಸ್ಟ್ ಬಳಿ ಗೋವಾ ನೋಂದಣಿಯಿದ್ದ ಲಾರಿ ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 64 ಲೀಟರ್ ಬಟ್ಟಿ ಮದ್ಯ ಪತ್ತೆಯಾಗಿದೆ.
ಅಬಕಾರಿ ಇಲಾಖೆ ಅಧಿಕಾರಿ ರವಿನಾರಾಯಣ, ಸಿಬ್ಬಂದಿ ಹನುಮಂತ ನಾಗನೂರ, ಮಂಜುನಾಥ ಬಳಗಪ್ಪನವರ, ಪ್ರವೀಣ ಯಡ್ರಾವಿ ಹಾಗೂ ಇತರರು ಇದ್ದರು. ಸ್ಥಳೀಯ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.