ಕಂಪ್ಲಿ: ವಿಮುಕ್ತ ದೇವದಾಸಿಯರ ಮನೆಗೆ ತೆರಳಿ ಕುಟುಂಬದ ಮರುಗಣತಿ ನಡೆಸಬೇಕು ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷೆ ಎಚ್.ಹುಲಿಗೆಮ್ಮ ಹೇಳಿದರು.
ತಹಸೀಲ್ದಾರ್ ಎಸ್.ಶಿವರಾಜ ಅವರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು. ರಾಜ್ಯ ಸರ್ಕಾರ ವಿಮುಕ್ತ ದೇವದಾಸಿಯರ ಕುಟುಂಬದ ಮರುಗಣತಿಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಫಲಾನುಭವಿಗಳ ಗಣತಿ ಆಗಬೇಕು. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಗಣತಿಯ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ವಿಮುಕ್ತ ದೇವದಾಸಿಯರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಬೇಕು. ಸಮೀಕ್ಷೆಗೆ ಒಳಪಟ್ಟ ಮಹಿಳೆಯರಿಗೂ ಸೌಲಭ್ಯ ಸಿಗಬೇಕು. ವಿಮುಕ್ತ ದೇವದಾಸಿಯರ ಮಕ್ಕಳಿಗೆ ಉದ್ಯೋಗ ಅಥವಾ 10 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು. ಮದುವೆಗೆ ಅರ್ಜಿ ಹಾಕಿದ ಆರು ತಿಂಗಳೊಳಗೆ ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಪದಾಧಿಕಾರಿಗಳಾದ ಹುಲಿಗೆಮ್ಮ, ಮಾರಮ್ಮ, ಕುಮಾರಮ್ಮ, ಹೊನ್ನೂರಮ್ಮ, ಬರ್ಮಕ್ಕ, ಮಹಾಲಕ್ಷೀ ಮಾಲಾಶ್ರೀ, ಚಂದ್ರಮ್ಮ, ಕಾಮಮ್ಮ, ಭೀಮಕ್ಕ, ಮಸ್ತಾನಮ್ಮ ಇತರರಿದ್ದರು.
09ಕೆಎಂಪಿ03
ಕಂಪ್ಲಿಯಲ್ಲಿ ದೇವದಾಸಿಯರ ವಿಮೋಚನಾ ಸಂಘದಿಂದ ತಹಸೀಲ್ದಾರ್ ಎಸ್.ಶಿವರಾಜ ಅವರಿಗೆೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷೆ ಎಚ್.ಹುಲಿಗೆಮ್ಮ, ಜಿಲ್ಲಾ ಕಾರ್ಯದರ್ಶಿಗಳಾದ ಸ್ವಾಮಿ, ಮಾಂತಮ್ಮ, ಮಾರಮ್ಮ, ಕುಮಾರಮ್ಮ ಇತರರಿದ್ದರು.