ಸಮಾಜಮುಖಿ ಕೆಲಸಕ್ಕೆ ಮುಂದಾಗಿ

Go for social work
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಗುರುಸಿದ್ಧೇಶ್ವರ ಶ್ರೀಗಳ 40ನೇ ಜನ್ಮದಿನ ನಿಮಿತ್ತ ಭಕ್ತರು ಅವರಿಗೆ ಶುಭಕೋರಿದರು. ನಂದಕುಮಾರ ಗಾಯಕವಾಡ, ಸಿದ್ದು ಈರಳಿ, ಅಣ್ಣಪ್ಪ ಬಿರಡಿ ಇದ್ದರು.
Published on

ರಬಕವಿ-ಬನಹಟ್ಟಿ: ಪ್ರತಿಯೊಬ್ಬರೂ ಸಮಾಜಮುಖಿ ಕೆಲಸ ಮಾಡಿದರೆ ಅವರ ಜನ್ಮ ಸಾರ್ಥಕವಾಗುತ್ತವೆ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಶ್ರೀಗಳು ತಮ್ಮ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಶುಭ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ಜನ್ಮ ದಿನವನ್ನು ಬುತ್ತಿ ಹಬ್ಬ ಎಂದು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಗುರುಗಳಿಲ್ಲದೆ ನೀವು ನಿಮ್ಮನ್ನು ಪರಿವರ್ತಿಸಿಕೊಳ್ಳಲು ಅಸಾಧ್ಯ. ಪ್ರತಿ ಹಂತದಲ್ಲೂ ನಿಮಗೆ ಮಾರ್ಗದರ್ಶಕವಾಗಬೇಕಾದರೆ ಗುರುವಿನ ಆವಶ್ಯಕತೆ ಇದೆ ಎಂದು ಶ್ರೀಗಳು ತಿಳಿಸಿದರು.

ಹಿಂದು ಪರ ಸಂಘಟನೆಗಳ ಮುಖಂಡ ನಂದಕುಮಾರ ಗಾಯಕವಾಡ ಮಾತನಾಡಿ, ಶ್ರೀ ಗುರುಸಿದ್ಧೇಶ್ವರ ಶ್ರೀಗಳ ಜನ್ಮದಿನದಂದು ನೂರಾರು ಮಹಿಳೆಯರು ರೊಟ್ಟಿ ಬುಟ್ಟಿಗಳಲ್ಲಿ ಬುತ್ತಿ ತಂದು ಸಾವಿರಾರು ಭಕ್ತರಿಗೆ ಅನ್ನದಾಸೋಹ ಮಾಡಿದ್ದು, ನಿಜವಾಗಲೂ ಭಾರತೀಯ ಸಂಪ್ರದಾಯದ ಕಾಯಕವಾಗಿದೆ ಎಂದರಲ್ಲದೆ, ಶ್ರೀಗಳು ಇಂದು 10 ಗಿಡಗಳನ್ನು ನೆಟ್ಟಿದ್ದು ತುಂಬ ಸಂತಸ ತಂದಿದೆ ಎಂದರು.

ನಂದಕುಮಾರ ಗಾಯಕವಾಡ, ಸಿದ್ದು ಈರಳಿ, ಅಣ್ಣಪ್ಪ ಬಿರಡಿ ಸೇರಿ ಬನಹಟ್ಟಿ, ರಬಕವಿ, ಚಿಮ್ಮಡ, ಹಾರೂಗೇರಿ, ಹನಗಂಡಿ, ತೇರದಾಳ, ಮದನಮಟ್ಟಿ, ಹಳಿಂಗಳಿ, ಜಗದಾಳ, ನಾವಗಲಿ, ಯಲ್ಲಟ್ಟಿ, ಆಸಂಗಿ ಗ್ರಾಮಗಳ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net