ಗೋ ಬ್ಲೂ ಅಭಿಯಾನಕ್ಕೆ ಚಾಲನೆ

abhiyana
ಗೋ ಬ್ಲೂ ಅಭಿಯಾನ’ದ ಅಂಗವಾಗಿ ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ ನೀಲಿ ಲಕೋಟೆ ಬಿಡುಗಡೆಗೊಳಿಸಿದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ, ಆಸ್ಪತ್ರೆ ಪ್ರತಿನಿಧಿ ಡಾ.ಸಂತೋಷ್ ಇದ್ದರು.
Published on

ಕಾಸರಗೋಡು: ಆ್ಯಂಟಿಬಯೋಟಿಕ್ ಔಷಧಗಳ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ‘ಗೋ ಬ್ಲೂ ಅಭಿಯಾನ’ದ ಅಂಗವಾಗಿ ಕಾಞಂಗಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆ್ಯಂಟಿಬಯೋಟಿಕ್ ಮಾತ್ರೆಗಳ ವಿತರಣೆಗೆ ಸೂಚನೆಗಳನ್ನು ಒಳಗೊಂಡ ನೀಲಿ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ, ಆಸ್ಪತ್ರೆ ಪ್ರತಿನಿಧಿ ಡಾ.ಸಂತೋಷ್ ಅವರಿಗೆ ನೀಲಿ ಲಕೋಟೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಜಿಲ್ಲಾ ನೋಡಲ್ ಅಧಿಕಾರಿ ಡಾ.ಬಿಪಿನ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ, ಆಸ್ಪತ್ರೆ ಸಿಬ್ಬಂದಿ ಹಾಗೂ ನಗರಸಭಾ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net