ರೋಗಮುಕ್ತ ಸಮಾಜ ನಿರ್ಮಿಸಲು ಮುಂದಾಗಿ

hnd 1-2
ಹುನಗುಂದ ಗೌರಮ್ಮ ನರ್ಸಿಂಗ್ ಕಾಲೇನಲ್ಲಿ ಹಮ್ಮಿಕೊಂಡ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಸುಭಾರಾಣಿ ಮಾತನಾಡಿದರು. ಡಾ. ಮಹಾಂತೇಶ ಕಡಪಟ್ಟಿ, ರವಿ ಹುಚನೂರ ಇದ್ದರು.
Published on

ಹುನಗುಂದ: ಕಾಲಾಂತರದಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಆಹಾರ ಮತ್ತು ಶ್ರಮದ ಪದ್ಧತಿಯನ್ನು ನಾವೆಲ್ಲರೂ ಅಳವಡಿಸಿಕೊಂಡು ರೋಗಮುಕ್ತ ಸಮಾಜ ನಿರ್ಮಿಸಬೇಕೆಂದು ಡಾ. ಶುಭಾರಾಣಿ ಕಡಪಟ್ಟಿ ಹೇಳಿದರು.

ಪಟ್ಟಣದ ವಿ.ಸಿ. ಚರಂತಿಮಠ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿನ ಗೌರಮ್ಮ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ಮತ್ತು ಆರೋಗ್ಯ ಸಮತೋಲನ ಕಾಪಾಡಿಕೊಂಡು ಯಾವ ಕಾಯಿಲೆಗೂ ತುತ್ತಾಗದೆ ಶತಾಯುಷಿಯಾಗಿ ಬದುಕಿದ್ದರು. ಆದರೆ, ನಾವಿಂದು ರಾಸಾಯನಿಕ, ಕಲುಷಿತ ಆಹಾರ ಸೇವಿಸುತ್ತಿದ್ದರಿಂದಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ ಎಂದರು.

ನರ್ಸಿಂಗ್ ವಿದ್ಯಾರ್ಥಿಗಳು ತರಬೇತಿಯಲ್ಲಿ ತಾಳ್ಮೆಯಿಂದ ಸಾಕಷ್ಟು ವಿಷಯಗಳ ಅನುಭವ ಪಡೆದುಕೊಳ್ಳಬೇಕಲ್ಲದೆ, ವೈದ್ಯರ ಸಲಹೆಯಂತೆ ರೋಗಿಗಳ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.

ಖ್ಯಾತ ವೈದ್ಯ ಡಾ. ಎನ್.ಆರ್. ವಣಕಿ ಮಾತನಾಡಿ, ರೋಗ ಬರದಂತೆ ಆಹಾರ ಸೇವನೆಗೆ ಒತ್ತು ನೀಡಬೇಕು. ಬಂದ ರೋಗಗಳು ಯಾವ ಆಹಾರ ಸೇವನೆಯಿಂದ ನಿಯಂತ್ರಣ ಆಗುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಡಾ. ಮಹಾಂತೇಶ ಕಡಪಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ನಿರ್ದೇಶಕ ರವಿ ಹುಚನೂರ, ಈರಣ್ಣ ಬಳೂಟಗಿ, ರಾಚಪ್ಪ ರಾಜಮನಿ ಇದ್ದರು. ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ ಸ್ವಾಗತಿಸಿದರು. ವೀಣಾ ಕಿರಗಿ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು.

ಕಾಲೇಜು ಆವರಣದಲ್ಲಿ ಎಲ್ಲ ವರ್ಗಗಳ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸುರಕ್ಷಿತ ಆರೋಗ್ಯ ಭಾಗ್ಯಕ್ಕೆ ಬೇಕಾಗುವ ಮತ್ತು ಅವಶ್ಯಕವಾಗಿ ಬಳಸುವ ಆಹಾರ ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net