

ಬೆಳಗಾವಿ:ಆಕಾರ, ಅಲಂಕಾರಗಳಲ್ಲಿ ವೈವಿಧ್ಯತೆ ಮೆರೆದ ನೂರಾರು ಗಣೇಶ ಮೂರ್ತಿಗಳ ಸರತಿ ಸಾಲು, ಗುಲಾಲು ಎರಚಿಕೊಂಡು ನರ್ತಿಸಿದ ಯುವಕರು, ಸಾಂಸ್ಕೃತಿಕ ತಲಾತಂಡಗಳು, ಜಾಂಝ್ ಪಥಕ್, ಸಿಡಿಮದ್ದುಗಳ ಭರಾಟೆ, ರಾರಾಜಿಸಿದ ಬಾಲಗಂಗಾಧರ ತಿಲಕ, ವೀರ ಸಾರ್ವಕ,ಭಾವಚಿತ್ರಗಳು..
ಇದು ಬೆಳಗಾವಿ ನಗರದಲ್ಲಿ ಮಂಗಳವಾರ ಜರುಗಿದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಂಡುಬಂದ ದೃಶ್ಯ..
ಸಾಂಸ್ಕೃತಿಕ ಮೆರುಗು
ಜಾಂಝ್ ಪಥಕ, ಡೊಳ್ಳು ಕುಣಿತ, ಸಾಧು-ಸಂತರ ಹಾಡು, ಜಾನಪದ ಮೇಳ ಗಣೇಶ ವಿಸರ್ಜನೆಗೆ ಸಾಂಸ್ಕೃತಿಕ ಮೆರುಗು ತಂದವು. ಮಹಿಳೆಯರಿಂದ ಕೂಡಿದ ಡೋಲು ತಂಡ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಯುವಕರ ಜಾಂಝ್ ಪಥಕಗಳು ನೋಡುಗರನ್ನು ನಿಂತಲ್ಲೆ ಹೆಜ್ಜೆ ಹಾಕಿಸಿದರೆ, ವಿವಿಧ ತಂಡಗಳ ನೃತ್ಯವು ಮೆಚ್ಚುಗೆಗೆ ಪಾತ್ರವಾದವು.