ಸದೃಢ ಭಾರತ ನಿರ್ಮಾಣ ಸಾಕಾರ

jnanasudha
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾಜಿ ನೌಕಾಧಿಕಾರಿ, ಲೆ.ಕಮಾಂಡರ್ ಭರತ್ ಕುಮಾರ್ ಧ್ವಜಾರೋಹಣಗೈದರು
Published on

ಕಾರ್ಕಳ: ದೇಶ ಭಕ್ತಿ ನಮ್ಮ ಪ್ರತಿ ಕೆಲದಲ್ಲೂ ಇರಬೇಕು. ನಮ್ಮ ಪ್ರಧಾನಿಯವರ ಕನಸಾದ ಸದೃಢ ಭಾರತದ ನಿರ್ಮಾಣದಲ್ಲಿ ನಾವೆಲ್ಲರೂ ನಮ್ಮ ಪಾತ್ರವನ್ನು ಧನಾತ್ಮಕ ಚಿಂತನೆಗಳ ಮೂಲಕ ಸಾಕಾರಗೊಳಿಸಬೇಕು ಎಂದು ಮಾಜಿ ನೌಕಾಧಿಕಾರಿ ಭರತ್‌ಕುಮಾರ್ ಹೇಳಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಸಿ.ಎ.ನಿತ್ಯಾನಂದ ಪ್ರಭು, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾ ರಾವ್ ಯು., ಪ್ರೌಢಶಾಲಾ ವಿಭಾಗ ಉಪಪ್ರಾಂಶುಪಾಲ ವಾಣಿ ಕೆ. ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net