

ನರಗುಂದ: ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪಟ್ಟಣದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತನ್ಮಯಿ ದೋತ್ರದ, ಶ್ರಾವಣಿ ಮಂಟೂರ, ಅನನ್ಯ ಹಂಗನಕಟ್ಟಿ, ರೀಜಾನ್ ನದಾಫ್ ಪ್ರೌಢ ಶಾಲಾ ವಿಭಾಗದ ಸೆಟಲ್ ಬ್ಯಾಡ್ಮಿಂಟನ್‌ನಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ ಚದುರಂಗ ಆಟದಲ್ಲಿ ತನುಶ್ರೀ ಕೊಳ್ಳಿಯವರ, ನಿವೇದಿತಾ ಲಮಾಣಿ ಹಾಗೂ ಬಾಲಕರ ಪ್ರಾಥಮಿಕ ವಿಭಾಗದಲ್ಲಿ ಋತ್ವಿಕ ಸಿರಿಯನ್ನವರ, ಪ್ರೀತಮ್ ಹಂಗನಕಟ್ಟಿ ಸೆಟಲ್ ಬ್ಯಾಡ್ಮಿಂಟನ್‌ನಲ್ಲಿ ಸುಮಿತ್ ಪುರೋಹಿತ, ಮೊಹಮದ್ ಫೈಜಲ್ ನದಾಫ್ ಟೇಬಲ್ ಟೆನ್ನಿಸ್‌ನಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳ ಸಾಧನೆಗೆ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.