ಜ್ಞಾನಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ, ಕ್ರೀಡಾಕೂಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

KOLHAR JNANA BHARATI SCHOOL
ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಪ್ರಾಥಮಿಕ ಶಾಲೆಯ ವಿಜೇತ ಕ್ರೀಡಾಪಟುಗಳೊಂದಿಗೆ ಶಾಲೆ ಶಿಕ್ಷಕರು ಸಂಭ್ರಮಾಚರಿಸಿದರು. ಸೋಮು ಸಾಗರ, ಸುರೇಶ ಜಾಧವ, ಶಫೀಕ ಕೊಲ್ಹಾರ ಮತ್ತಿತರರಿದ್ದಾರೆ.
Published on

ಕೊಲ್ಹಾರ: ತಾಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮೆರೆದಿದ್ದಾರೆ.

ಬಾಲಕೀಯರು ಹಾಗೂ ಬಾಲಕರ ವಿಭಾಗದ ವ್ಹಾಲಿಬಾಲ್ ಕ್ರೀಡೆ ಹಾಗೂ ಚಕ್ರ ಎಸೆತ, ಗುಂಡು ಎಸೆತ ವೈಯಕ್ತಿಕ ಆಟೋಟಗಳಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸೋಮು ಸಾಗರ, ತರಬೇತುದಾರ ಸುರೇಶ ಜಾಧವ, ಗ್ರಾಮದ ಪ್ರಮುಖರಾದ ಶಫೀಕ ಕೊಲ್ಹಾರ, ದಸ್ತಗೀರಸಾಬ ಮೋಪಗಾರ, ಶಾಸಪ್ಪ ಮಾದರ, ಮುಖ್ಯ ಗುರುಮಾತೆ ಸೀಮಾ ಹರಿಕಾಂತ, ಜಗದೀಶ ಸಾಲಳ್ಳಿ, ಶಿಕ್ಷಕ ಯಂಡಿಗೇರಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಸಂಭ್ರಮಾಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net