ರೈಲ್ವೆ ಸೌಲಭ್ಯ ಪರಿಶೀಲಿಸಿದ ಜಿಎಂ ಶ್ರೀವಾಸ್ತವ

new rail
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಹುಬ್ಬಳ್ಳಿ-ಕುಸುಗಲ್ಲ ಮಧ್ಯದ ರೈಲು ಮಾರ್ಗವನ್ನು ವಿಂಡೋ ಟ್ರೖೆಲಿಂಗ್ ಮೂಲಕ ಸೋಮವಾರ ಪರಿಶೀಲನೆ ನಡೆಸಿದರು.

ಈ ಮಾರ್ಗದ ಭದ್ರತೆ ಸೇರಿದಂತೆ ಮತ್ತಿತರ ಪ್ರಮುಖ ಅಂಶಗಳನ್ನು ವಿಂಡೋ ಟ್ರೖೆಲಿಂಗ್ ಮೂಲಕ ಪರಿಶೀಲಿಸಿರು.

ನಂತರ ಗದಗ, ಕೊಪ್ಪಳ, ತೋರಣಗಲ್ಲು ರೈಲು ನಿಲ್ದಾಣದ ಸೌಲಭ್ಯ, ಸ್ಟೇಶನ್ ಮಾಸ್ತರ್ ಕಚೇರಿ ಸೇರಿದಂತೆ ಇನ್ನಿತರ ಪ್ರಮುಖ ಅಂಶಗಳನ್ನು ಪರಿಶೀಲಿಸಿ, ರೈಲ್ವೆ ಸಿಬ್ಬಂದಿ ಜತೆಗೆ ರ್ಚಚಿಸಿದರು. ಅಭಿವೃದ್ಧಿ ಹಂತದಲ್ಲಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಹರ್ಷ ಖರೆ, ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net