

ಹುಬ್ಬಳ್ಳಿ : ಇಲ್ಲಿನ ಗದಗ ರಸ್ತೆಯ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಮಂಗಳವಾರದಂದು ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು. </p><p>ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತ</p><p>ವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ವಲಯದ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಇದೇ ಸಂದರ್ಭದಲ್ಲಿ ‘ತಿಂಗಳ ಸುರಕ್ಷತಾ ವ್ಯಕ್ತಿ’ ಪ್ರಶಸ್ತಿ ನೀಡಿ, ಗೌರವಿಸಿದರು.
ಪ್ರಶಸ್ತಿ ವಿವರ : ಹುಬ್ಬಳ್ಳಿ ವಿಭಾಗದಲ್ಲಿ ನಾರಾಯಣ ನಾಯಕ (ಸಹಾಯಕ, ಕ್ಯಾಸಲ್ ರಾಕ್), ವಿನಯಕುಮಾರ ಚೌಧರಿ (ಸಹಾಯಕ, ಕ್ಯಾಸಲ್ ರಾಕ್), ಪ್ರಬೀಶ ಪಿ. (ಲೋಕೋ ಪೈಲಟ್, ವಾಸ್ಕೋ), ವಿಶ್ವನಾಥ ಮಂಜುನಾಥ (ಹಿರಿಯ ಸಹಾಯಕ ಲೋಕೋ ಪೈಲಟ್ ), ಆರ್.ವಿ. ಹುಗ್ಗಿ ( ಹೆಡ್ ಕಾನಸ್ಟೇಬಲ್, ಆರ್ಪಿಎಫ್, ಗದಗ), ಸುಶೀಲಕುಮಾರ (ಕಾನಸ್ಟೇಬಲ್, ಆರ್ಪಿಎಫ್ ಪೋಸ್ಟ್, ಬೆಳಗಾವಿ).
ಬೆಂಗಳೂರು ವಿಭಾಗದ ಲಕ್ಷೀ ಕಾಂತ ಎನ್.ವಿ. (ಗೇಟ್ ಕೀಪರ್), ವಿಜಯ ಕುಮಾರ ಮೊಹೌರ (ಲೋಕೋ ಪೈಲಟ್), ಸಾಕೆ ರಾಜೇಶ್ (ಹಿರಿಯ ಸಹಾಯಕ ಲೋಕೋ ಪೈಲಟ್), ನಾಗರಾಜ್ (ಟೆಕ್ನಿಷಿಯನ್).
ಮೈಸೂರು ವಿಭಾಗದ ಸುಭಾಷ್ ಚಂದ್ರ ಗುಪ್ತಾ (ಗೇಟ್ ಮ್ಯಾನ್), ರಾಮಗೋಪಾಲಾಚಾರಿ (ಗ್ಯಾಂಗ್ ಮೇಟ್), ಪೂರ್ಣಸಿಂಗ್ ಮೀನಾ (ಟ್ರೖೆನ್ ಮ್ಯಾನೇಜರ್).
ಅರವಿಂದ ಶ್ರೀವಾಸ್ತವ ಅವರು ಈ ಉದೊ್ಯೕಗಿಗಳ ಅತ್ಯುತ್ತಮ ಜಾಗರೂಕತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು. ನೈಋತ್ಯ ರೈಲ್ವೆಯಲ್ಲಿ ಸುರಕ್ಷತೆಯು ಉನ್ನತ ಆದ್ಯತೆಯಾಗಿದೆ ಎಂದು ಹೇಳಿದರು.