

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ ಸರನ ಮಾಥುರ ಅವರು ಶನಿವಾರದಂದು ಹುಬ್ಬಳ್ಳಿ&ಹೊಸಪೇಟೆ ಮಧ್ಯೆ ವಿಂಡೋ ಟ್ರೇಲಿಂಗ್ ತಪಾಸಣೆ ಮೂಲಕ ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಹೊಸಪೇಟೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಒದಗಿಸುತ್ತಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲನೆ ಮಾಡಿದರು. ಹೊಸಪೇಟೆಯಲ್ಲಿನ ಸ್ಟೇಶನ್ ಯಾರ್ಡ್ನಲ್ಲಿ ಸಿಬ್ಬಂದಿ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ವೀಸಿದರು. ಸುರತ ರೈಲು ಸಂಚಾರಕ್ಕಾಗಿ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೊಸಪೇಟೆಯಲ್ಲಿನ ಕ್ಯಾರೇಜ್ ಮತ್ತು ವ್ಯಾಗನ್ ಟಕಕ್ಕೆ ಭೇಟಿ ನೀಡಿದರು. ರೈಲು ನಿಲ್ದಾಣದಲ್ಲಿನ ರನ್ನಿಂಗ್ ರೂಮ್, ನಿಲ್ದಾಣದ ಸ್ವಚ್ಛತೆ ಪರಿಶೀಲಿಸಿದರು. ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕಿ ಬೆಲಾ ಮೀನಾ ಹಾಗೂ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.