

ಅಥಣಿ: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಥಣಿ ಘಟಕಕ್ಕೆ ಜಿ.ಎಂ.ಹಿರೇಮಠ ಪೆನಲ್ ಅವಿರೋಧವಾಗಿ ಆಯ್ಕೆಯಾಗಿದೆ. ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ ಶಿಕ್ಷಕಕರು ಒಮ್ಮತದಿಂದ 24 ಶಿಕ್ಷಕರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ನಂತರ ಮಾತನಾಡಿದ ಜಿ.ಎಂ.ಹಿರೇಮಠ, ನನ್ನ ಮೇಲೆ ಭರವಸೆ ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದು, ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ ಎಂದರು. ಶಿಕ್ಷಕರಾದ ಎಂ.ಪಿ.ಬಿಜ್ಜರಗಿ, ಪಿ.ಎಚ್.ಪತ್ತಾರ, ಎ.ಬಿ.ಕುಟಕೋಳಿ, ಎಸ್. ಎ.ವಾಲಿ, ಎಂ.ಎಚ್.ಚುಲಪಿ, ಬಿ.ಎಲ್.ಪೂಜಾರಿ, ಜಿ.ಎಂ.ಮಾನೆ, ಎಸ್.ಟಿ.ಬೆಳ್ಳಂಕಿ, ಬಿ.ಎಂ.ಮೋಪಗಾರ, ಎಸ್.ಎನ್. ನಾಗಮೋತಿ, ಪಿ.ಎಸ್.ಮಸಳಿ, ಎ.ಕೆ.ಕೋಳಿ ಇತರರಿದ್ದರು.