ವ್ಯಾಪಾರ-ವಹಿವಾಟಿಗೆ ಸಹಕಾರಿ

GLS 14-1A
Published on

ಗೊಳಸಂಗಿ: ಐದು ದಶಕಗಳ ನಂತರ ನಮ್ಮೂರಲ್ಲಿ ವಾರದ ಸಂತೆ ಪುನರಾರಂಭಗೊಂಡಿರುವುದು ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಗ್ರಾಮದ ಧುರೀಣ ಜಿ.ಸಿ.ಮುತ್ತಲದಿನ್ನಿ ಸಂಭ್ರಮ ವ್ಯಕ್ತಪಡಿಸಿದರು.

ಸಮೀಪದ ಬೇನಾಳ-ಎನ್‌ಎಚ್ ಗ್ರಾಮದಲ್ಲಿ ವಾರದ ಸಂತೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. 70ರ ದಶಕದಲ್ಲಿ ಅವಿಭಜಿತ ಬೇನಾಳ ಗ್ರಾಮದಲ್ಲಿ ಪ್ರತಿ ಬುಧವಾರ ಸಂತೆ ನಡೆಯುತ್ತಿತ್ತು. ಕಾರಣಾಂತರಗಳಿಂದ ಬಂದ್ ಆದಾಗಿನಿಂದ ಪುನಾರಂಭಗೊಳಿಸಲು ಸಾಧ್ಯವಾಗಿರಲಿಲ್ಲ. 1997ರಲ್ಲಿ ಆಲಮಟ್ಟಿ ಆಣೆಕಟ್ಟೆ ಹಿನ್ನೀರಿನಿಂದ ಬೇನಾಳ ಮುಳುಗಡೆಯಾಗಿ ಆರ್‌ಎಸ್ ಮತ್ತು ಎನ್‌ಎಚ್ ಆಗಿ ಹರಿದು ಹಂಚಿ ಹೋದವು. ಈಗ ಎನ್‌ಎಚ್ ಬೇನಾಳದಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುವುದರಿಂದ ಗೋನಾಳ, ಅಬ್ಬಿಹಾಳ, ಉಣ್ಣಿಬಾವಿ, ಕಿರಿಶಾಳ, ಹೆಬ್ಬಾಳ ಮತ್ತಿತರ ಗ್ರಾಮಗಳ ಜನರು ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗಲಿದೆ ಎಂದರು.

ಪ್ರಮುಖ ಮಹಾದೇವಪ್ಪ ಪತ್ತೇಪುರ, ಪಿಡಿಒ ಎಸ್.ವೈ.ಕುಂಬಾರ ಮಾತನಾಡಿ, ಪ್ರತಿ ವಾರ ನಡೆಯಲಿರುವ ವಾರದ ಸಂತೆಯ ಲಾಭವನ್ನು ವ್ಯಾಪಾರಿಗಳು-ಗ್ರಾಹಕರು ಪಡೆದುಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ರುಬಿನಾ ಬಿಳೆಕುದರಿ, ಉಪಾಧ್ಯಕ್ಷೆ ಕವಿತಾ ರಾಠೋಡ, ಮುಖಂಡರಾದ ಗ್ಯಾನಪ್ಪಗೌಡ ಬಿರಾದಾರ, ಅಮಾತೆಪ್ಪ ದಾಳಪ್ಪಗೋಳ, ಬಿ.ಎಚ್.ಗಣಿ, ಬಾಬುಲಾಲ ಸಾಲಿಮನಿ, ಶ್ರೀಶೈಲ ಕಟ್ಟಿಮನಿ, ಮಲ್ಲಪ್ಪ ಗಾಳಪ್ಪಗೋಳ, ಮುತ್ತು ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net