

ರಾಯಚೂರು: ಕನ್ನಡ ನಾಡಿನ ಕೀರ್ತಿಯನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿಗಳಲ್ಲಿ ಎಂ.ವಿಶ್ವೇಶ್ವರಯ್ಯ ಒಬ್ಬರಾಗಿದ್ದು, ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಹಿರಿಯ ಸಿವಿಲ್ ಇಂಜಿನಿಯರ್ ಚನ್ನಬಸವ ಮಲ್ದಕಲ್ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವೇಶ್ವರಯ್ಯ ಶಿಸ್ತಿನ ಸಿಪಾಯಿ ಆಗಿರುವುದರ ಜತೆಗೆ ಅಪಾರ ಜ್ಞಾನ ಹೊಂದಿರುವ ಮೇಧಾವಿಯಾಗಿದ್ದರು ಎಂದರು.
ಬಡತನದಲ್ಲಿ ಬೆಳೆದು ಉನ್ನತ ವಿಚಾರಗಳನ್ನು ಹೊಂದಿದ್ದು, ಇಂಜಿನಿಯರಿಂಗ್‌ನಲ್ಲಿ ಉನ್ನತ ಸಾಧನೆ ಮಾಡಿದ ವ್ಯಕ್ತಿಯಾಗಿದ್ದರು. ದೇಶಕ್ಕೆ ಅವರು ನೀಡಿರುವುದು ಗುರುತಿಸಿ ಅವರ ಜನ್ಮದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಚನ್ನಬಸವ ಮಲ್ದಕಲ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ನವೋದಯ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕ ವಿ.ಕೆ.ಮುಜುಂದಾರ್, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರು, ಪದಾಕಾರಿಗಳಾದ ಸುರೇಶ ಹೀರಾ, ಎಚ್.ಶಿವರಾಜ, ಆಂಜಿನೇಯ ಜಾಲಿಬೆಂಚಿ, ವಿ.ಎನ್.ಅಕ್ಕಿ, ರೇಖಾ ಬಡಿಗೇರ, ಶಾಂತಾ ಕುಲಕರ್ಣೀ, ಬಷೀರ್ ಅಹ್ಮದ್ ಹೊಸಮನಿ, ವಿಜಯರಾಜೇಂದ್ರ, ದಂಡಪ್ಪ ಬಿರಾದರ ಉಪಸ್ಥಿತರಿದ್ದರು.