ವೈಭವದ ಪ್ರಸನ್ನ ಗಣಪತಿ ಮೆರವಣಿಗೆ

CTD 02 Ganapathi JM road
Published on

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆ ಪ್ರಶಾಂತ ನಗರದಲ್ಲಿ ಎಸ್‌ಟಿಆರ್ ಟೀಮ್ ಯುವಕರ ಬಳಗ ಪ್ರತಿಷ್ಠಾಪಿಸಿದ್ದ ಪ್ರಸನ್ನ ಗಣಪತಿ ಮೂರ್ತಿಯ ವೈಭವದ ಮೆರವಣಿಗೆ, ವಿಸರ್ಜನಾ ಮಹೋತ್ಸವ ಭಾನುವಾರ ರಾತ್ರಿ ನೆರವೇರಿತು.

ಮುಂಜಾನೆ ಸುಪ್ರಭಾತ ಸೇವೆ, ಅಷ್ಟೋತ್ತರ, ಪ್ರಾರ್ಥನೆ, ಅರ್ಚನೆ, ಮಹಾಮಂಗಳಾರತಿ ಸೇರಿ ಇತರೆ ಪೂಜಾ ಕಾರ್ಯಗಳು ನೆರವೇರಿದವು. ನಂತರ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

ಮೆರವಣಿಗೆ ಅಂಗವಾಗಿ ಸ್ವಾಮಿಯ ಮೂರ್ತಿಗೆ ಬೃಹತ್ ಹೂವಿನ ಹಾರ, ಹಿಂಭಾಗದ ಪ್ರಭಾವಳಿಯನ್ನು ವಿವಿಧ ವರ್ಣದ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ನೂರಾರು ಯುವಕ-ಯುವತಿಯರು ಪಾಲ್ಗೊಂಡು ಡಿಜೆ ಹಾಡುಗಳ ಸದ್ದಿಗೆ ಕುಣಿದು ಸಂಭ್ರಮಿಸಿದರು. 14 ದಿನ ಪ್ರತಿಷ್ಠಾಪಿಸಿದ್ದ ಗಣಪತಿ ಸನ್ನಿಧಿಯಲ್ಲಿ ರಂಗೋಲಿ ಸ್ಪರ್ಧೆ, ಆರ್ಕೆಸ್ಟ್ರಾ, ನೃತ್ಯ ಸ್ಪರ್ಧೆ ಸೇರಿ ನಿತ್ಯ ವೈವಿಧ್ಯಮಯ ಕಾರ್ಯಕ್ರಮ ನಡೆದವು.
ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಸುಣ್ಣದಗುಮ್ಮಿ ಸೇರಿ ಇತರೆಡೆಯ ಚಿಣ್ಣರು, ಮಹಿಳೆಯರು ಕೂಡ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ವಾಮಿಯ ಮೂರ್ತಿ ವಿಸರ್ಜನೆ ಮೂಲಕ ಮಹೋತ್ಸವ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net