

ಸಂಡೂರು: ಐಎಎಸ್, ಕೆಎಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ತಾಲೂಕಿನ ಪ್ರತಿ ಚರ್ಚ್‌ಗೆ ನಾಲ್ಕು ಕಂಪ್ಯೂಟರ್ ಮತ್ತು ಪೀಠೋಪಕರಣ ಒದಗಿಸುವುದಾಗಿ ಸಂಸದ ಈ.ತುಕಾರಾಮ್ ಹೇಳಿದರು.
ಇದನ್ನೂ ಓದಿ: ರೋಜರಿ ಚರ್ಚ್ನಲ್ಲಿ ಮಕ್ಕಳ ಜುಬಲಿ ಉತ್ಸವ
ಚೋರುನೂರು ಚರ್ಚ್‌ನ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಅಧಿಕಾರ ಶಾಶ್ವತವಲ್ಲ. ಹುಟ್ಟು ಸಾವಿನ ನಡುವಿನ ಸಾಧನೆಗಳು ಮಾತ್ರ ಶಾಶ್ವತ. ಪ್ರತಿಯೊಬ್ಬರ ಬಗ್ಗೆ ಪ್ರೀತಿ ಹೊಂದಿದ್ದ ಯೇಸುಕ್ರಿಸ್ತ ಜಾಗತಿಕ ಶಾಂತಿ ಧೂತರಾಗಿದ್ದಾರೆ ಎಂದರು.
ಶಾಸಕಿ ಅನ್ನಪೂರ್ಣ ಮಾತನಾಡಿ, ನಾವು ಚಿಕ್ಕವರಿದ್ದಾಗಲೇ ಯೇಸುಕ್ರಿಸ್ತ, ಜತೆಗೆ ಹಿಂದು, ಮುಸ್ಲಿಂ ಧರ್ಮದ ಪುಸ್ತಕಗಳನ್ನು ನಮ್ಮ ತಂದೆ ಓದಿಸುತ್ತಿದ್ದರು. ಜಾತಿ, ಭೇದಗಳನ್ನು ಎಂದೂ ಮಾಡದಂತೆ ತಿಳಿಸುತ್ತಿದ್ದರು. ಚರ್ಚ್‌ಗೆ ಬರುವ ಜನರ ಬಿಪಿಎಲ್ ಕಾರ್ಡ್‌ದಾರರ ಪಟ್ಟಿ ನೀಡಿದಲ್ಲಿ ನಿವೇಶನ, ವಸತಿ ಒದಗಿಸುವುದಲ್ಲದೆ ಜಿ ಪ್ಲಸ್-2 ಮನೆಗಳನ್ನು ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಗುರುತಿಸಲು ಈಗಾಗಲೇ ಕ್ಷೇತ್ರದಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಸುವರ್ಣ ಸಂಡೂರು ಮಾಡುವ ಗುರಿ ಹೊಂದಲಾಗಿದೆ ಎಂದರು.