ಇಂದಿನಿಂದ 3 ದಿನ ಜಿವಿಕೆಯಲ್ಲಿ ಜಾಗತಿಕ ಸಮಾವೇಶ

gkvk campus
Published on

ಬೆಂಗಳೂರು: ಹೈನೋದ್ಯಮ, ಹುಲ್ಲುಗಾವಲು, ಬೇಸಾಯದ ಮೇವಿನ ಬೆಳೆಗಳ ಕುರಿತು ‘ಸುಸ್ಥಿರ ಪರಿಸರಸ್ನೇಹಿ ಹುಲ್ಲುಗಾವಲು, ಮೇವು ಮತ್ತು ಪ್ರಾಣಿವಿಜ್ಞಾನ ನಾವಿನ್ಯತೆಯಿಂದ ಭವಿಷ್ಯದ ಪೋಷಣೆ’ ಕುರಿತಾದ ಜಾಗತಿಕ ಸಮಾವೇಶ ಜಿಕೆವಿಕೆಯಲ್ಲಿ ಶನಿವಾರದಿಂದ ಮೂರು ದಿನ ನಡೆಯಲಿದೆ.

ಸಮಾವೇಶದಲ್ಲಿ 300ಕ್ಕೂ ಅಧಿಕ ಸಂಶೋಧನಾ ವಿಜ್ಞಾನಿಗಳು, 52 ಸಂಸ್ಥೆಗಳು, ಐದು ದೇಶಗಳ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಭಾಗಿಯಾಗಲಿದ್ದಾರೆ. ಜಿನೋಮ್ ಇಂಡಿಯಾ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಪ್ರೊ. ಚಿತ್ತರಂಜನ್ ಕೋಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಬಾಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ದಿನೇಶ್, ಐಸಿಎಆರ್‌ನ ಎಡಿಡಿ ಡಾ. ಎಸ್.ಕೆ.ಪ್ರಧಾನ್, ಮಥುರಾದ ಸಂಸ್ಕೃತಿ ವಿವಿಯ ಕುಲಪತಿ ಡಾ. ಎಂ.ಬಿ.ಚೆಟ್ಟಿ ಗೌರವ ಅತಿಥಿಗಳಾಗಿ ಭಾಗಿಯಾಗಲಿದ್ದು, ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ನಿರ್ದೇಶಕ ಜಾನ್ಸಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾವೇಶದಲ್ಲಿ ತಲಾ ಏಳು ತಾಂತ್ರಿಕ ಹಾಗೂ ಅಧಿವೇಶನಗಳು ಇರಲಿವೆ. ಯುವ ವಿಜ್ಞಾನಿಗಳನ್ನು ಉತ್ತೇಜಿಸಲು ಸಂಶೋಧಕರ ಗೋಷ್ಠಿ ಹಾಗೂ ಸಂಶೋಧನೆಯಲ್ಲಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆ ಹೆಚ್ಚಿಸಲು ‘ವಿಜ್ಞಾನಿ - ಖಾಸಗಿ ಕಂಪನಿಗಳ ಗೋಷ್ಠಿ’ ಆಯೋಜಿಸಲಾಗಿದೆ. ಕರ್ನಾಟಕದ ಕೃಷಿ ಸಂಬಂಧಿತ ವಿವಿಗಳ ಕುಲಪತಿಗಳು ಹಾಗೂ ಕೃಷಿ ವಿಜ್ಞಾನಿಗಳು ಕೂಡ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net