ತುಳಸಿ ಹೆಗಡೆಗೆ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್

TULASI HEGDE BETTAKOPPA
Published on

ಶಿರಸಿ: ಚೆನ್ನೈ ನ ಹಿಂದುಸ್ತಾನ್ ಹಾಗೂ ಚಾರ್ಲೀಸ್ ಗ್ರುಪ್​ಗಳ ಸಹಕಾರದಲ್ಲಿ ನೀಡುವ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್​ಗೆ ತಾಲೂಕಿನ ಬೆಟ್ಟಕೊಪ್ಪದ ವಿದ್ಯಾರ್ಥಿನಿ ತುಳಸಿ ಹೆಗಡೆ ಆಯ್ಕೆಯಾಗಿದ್ದಾರೆ.

ಜಗತ್ತಿನ 130ದೇಶಗಳಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಸಾಧಕ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಮಕ್ಕಳ ಅರ್ಹತೆ, ಸಾಧನೆ, ಅವರ ನಿರಂತರ ಶ್ರಮ ಪರಿಗಣಿಸಿ ತಜ್ಞರ ಸಮಿತಿ ನೂರು ಸಾಧಕ ಮಕ್ಕಳನ್ನು ಆಯ್ಕೆ ಮಾಡಿದ್ದು ಈ ಪಟ್ಟಿಯಲ್ಲಿ ಕನ್ನಡದ ಕಲೆ ಯಕ್ಷಗಾನದ ಮೂಲಕ ಹೆಸರಾದ ತುಳಸಿ ಹೆಗಡೆ ಕೂಡ ಒಬ್ಬರಾಗಿದ್ದಾರೆ.

ವಿಶ್ವಶಾಂತಿಗಾಗಿ ಗೆಜ್ಜೆ ಕಟ್ಟಿದ ತುಳಸಿ ಹೆಗಡೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವಿಶ್ವಶಾಂತಿ ಸರಣಿಯಲ್ಲಿ ಪೌರಾಣಿಕ ಕಥಾ ಭಾಗದ ಹೊಸ ಹೊಸ ಯಕ್ಷ ರೂಪಕಗಳನ್ನು ಪ್ರದರ್ಶನ ನೀಡುತ್ತಿದ್ದಾಳೆ.

ಈಗಾಗಲೇ ಈಕೆ ಚೆನ್ನೈ ರೋಟರಿ ಕ್ಲಬ್ ನೀಡುವ ಯಂಗ್ ಅಚೀವರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ.

ಯಕ್ಷಗಾನ ಕಲೆಯ ಮೂಲಕ ನಿರಂತರವಾಗಿ ವಿಶ್ವಶಾಂತಿ ಸಂದೇಶ ಸಾರುವ ಕಾರಣಕ್ಕೆ ಈ ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ. ವಿವಿಧ ಕ್ಷೇತ್ರದ ಸಾಧಕ ಗಣ್ಯರು ಜೂನ್ 26ರಂದು ಯುನೈಟೆಡ್ ಕಿಂಗ್ ಡಮ್ ನ ಬ್ರಿಟಿಷ್ ಪಾರ್ಲಿಮೆಂಟ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಸ್ಥಾಪಕ ಪ್ರಶಾಂತಕುಮಾರ ಪಾಂಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net