

ಹುಬ್ಬಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ಡಾ. ಬ್ರಹ್ಮಕುಮಾರ ಬಸವರಾಜ ರಾಜಋಷಿ ಅವರು ಇಂಗ್ಲೆಂಡ್ನ ಗ್ಲೋಬಲ್ ಬುಕ್ ಆಫ್ ಎಕ್ಸಲೆನ್ಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಹಾವೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ಲೋಬಲ್ ಬುಕ್ ಆಫ್ ಎಕ್ಸಲೆನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಮನೀಷಕುಮಾರ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿದರು. ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದಿ, ರಾಜಯೋಗಿನಿ ಬಿ.ಕೆ. ನಿರ್ಮಲಾ, ಬಿ.ಕೆ. ಲೀಲಾ, ಶ್ರೀಧರ ದಾವಸ್ಕರ, ಇತರರು ಇದ್ದರು.
ಹುಬ್ಬಳ್ಳಿಯಲ್ಲಿ ವಿಶ್ವದಲ್ಲಿಯೇ ದೊಡ್ಡದಾದ ಭಗವದ್ಗೀತಾ ಜ್ಞಾನಲೋಕ ಆಧ್ಯಾತ್ಮಿಕ ಆರ್ಟ್ ಗ್ಯಾಲರಿಯನ್ನು ನಿರ್ವಿುಸಿದಕ್ಕಾಗಿ ಡಾ. ರಾಜಋಷಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಅವರ ಈ ಕೊಡುಗೆಯು ಭಾರತದ ಮಹಾನ್ ಗ್ರಂಥದ ಪ್ರತಿಯಾಗಿ ಅಪಾರ ಭಕ್ತಿ, ನಾಯಕತ್ವ, ಸಂಸ್ಕೃತಿ ಸಂರಕ್ಷಣೆಯ ಬದ್ಧತೆಯ ಪ್ರತೀಕವಾಗಿದೆ ಎಂದು ಪ್ರಶಂಸಿಸಿದೆ.