ಮೂರ್ತಿ ಸ್ಥಾಪನೆಗೆ ಅನುವು ಮಾಡಿಕೊಟ್ಟಿರುವುದು ಸಂತಸ

7 rbk-1
ರಬಕವಿ ಮಹಾಲಿಂಗಪುರ ನಾಕಾದ ಬಳಿಯ ಭಗೀರಥ ವೃತ್ತದಲ್ಲಿ ಭಗೀರಥ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಬಸಪ್ಪ ಗೋಪಾಳಿ, ಪರಪ್ಪ ಬ್ಯಾಕೋಡ, ಯಮನಪ್ಪ ಉಪ್ಪಾರ ಇದ್ದರು.
Published on

ರಬಕವಿ/ಬನಹಟ್ಟಿ: ಈ ಭಾಗದಲ್ಲಿ ನಮ್ಮ ಸಮುದಾಯ ಅತಿ ಕಡಿಮೆಯಿದ್ದರೂ ಭಗೀರಥರ ಪ್ರತಿಮೆ ನಿರ್ಮಿಸಲು ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತ ಅನುವು ಮಾಡಿಕೊಟ್ಟಿರವುದು ಸಂತಸ ತಂದಿದೆ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಬಸವರಾಜ ಗೋಪಾಳ ತಿಳಿಸಿದರು.

ರಬಕವಿ ಮಹಾಲಿಂಗಪುರ ನಾಕಾದ ಬಳಿಯ ಭಗೀರಥ ವೃತ್ತಲ್ಲಿ ಭಗೀರಥ ಪ್ರತಿಮೆ ಪ್ರತಿಷ್ಠಾಪನೆಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಭಗೀರಥನು ಹಿಂದು ನದಿ ದೇವತೆ ಗಂಗಾ ಎಂದು ನಿರೂಪಿಸಲ್ಪಟ್ಟ ಪವಿತ್ರ ನದಿ ಗಂಗಾವನ್ನು ಸ್ವರ್ಗದಿಂದ ಭೂಮಿಗೆ ತಂದವರು. ಅದಕ್ಕಾಗಿ ಅಂಥಹ ಮಹಾನ್ ಸತ್ಪುರುಷನ ಪ್ರತಿಮೆ ಪ್ರತಿಷ್ಠಾಪಿಸಲು ನಮಗೆಲ್ಲರಿಗೂ ಅವಕಾಶ ದೊರಕಿದ್ದು ನಮ್ಮ ಪೂರ್ವಜರ ಪುಣ್ಯದ ಫಲವಾಗಿದೆ ಎಂದರು.

ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ, ತಾಲೂಕಿನ ಹನಗಂಡಿ ಗ್ರಾಮದ ಕಂಚಗಾರ ಸಮುದಾಯದವರಲ್ಲಿ ಅಂದಾಜು 6 ಲಕ್ಷಕ್ಕೂ ಅಧಿಕ ಬೆಲೆಯಲ್ಲಿ ಮಹಷಿರ ಭಗೀರಥರ ಪ್ರತಿಮ ತಯಾರಾಗುತ್ತಿದೆ. 6.15 ಇಂಚು ಎತ್ತರದ ಪ್ರತಿಮೆ ಕೆಲವೇ ತಿಂಗಳುಗಳಲ್ಲಿ ಅನಾವರಣಕ್ಕೆ ತಯಾರಿಯಾಗಲಿದೆ ಎಂದು ಸವದಿಯವರು ಪತ್ರಿಕಿಗೆ ತಿಳಿಸಿದರು.

ಸಮಾಜದ ಮುಖಂಡರಾದ ಪರಪ್ಪ ಬ್ಯಾಕೋಡ, ಮಲ್ಲಪ್ಪ ಬ್ಯಾಕೋಡ, ಮಹಾಲಿಂಗಪ್ಪ ಲಾತೂರ, ಭೀಮಪ್ಪ ಸಸಾಲಟ್ಟಿ, ಯಮನಪ್ಪ ಉಪ್ಪಾರ, ರಾಯಪ್ಪ ಹೆಗ್ಗಾಣಿ, ಭೀಮಶಿ ಪಾಟೀಲ, ಸುರೇಶ ಪಾಟೀಲ, ಪ್ರಕಾಶ ಬೆಂಡಿಕಾಯಿ, ಯಲ್ಲಪ್ಪ ಕೊಡಗಾನೂರ, ಹೊಳೆಪ್ಪ ಬ್ಯಾಕೋಡ, ಶಂಕರ ಉಸಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net