

ಪುತ್ತೂರು: ಚಿನ್ನದ ಮೇಲೆ ಹೆಚ್ಚಿನ ವ್ಯಾಮೋಹವಿದ್ದರೂ ಹೂಡಿಕೆಯ ದೃಷ್ಟಿಯಿಂದಲೂ ಚಿನ್ನ ಹೆಚ್ಚಿನ ಮಹತ್ವ ಹೊಂದಿದೆ. ಪುತ್ತೂರಿನಲ್ಲಿ ಮನೆ ಮಾತಾಗಿರುವ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಹಲವು ವರ್ಷಗಳಿಂದ ಗ್ಲೋ ಫೆಸ್ಟ್ ಆಯೋಜಿಸುತ್ತಿದೆ. ಹೆಸರಿನಂತೆ ಹೊಳಪಿನಿಂದ ಪ್ರಕಾಶ ಮಾನವಾಗಿ ಬೆಳಗುವಂತಾಗಲಿ ಎಂದು ವಿವೇಕಾನಂದ ಸ್ನಾತಕೋತ್ತರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಹೇಳಿದರು.
ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟದ ‘ಗ್ಲೋ ಫೆಸ್ಟ್’ ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ಮಳಿಗೆಯಲ್ಲಿ ಕಳೆದ ೧೨ ವರ್ಷಗಳಿಂದ ಗ್ಲೋ ಫೆಸ್ಟ್‌ನ್ನು ಆಯೋಜಿಸಲಾಗುತ್ತಿದೆ. ವಜ್ರವೆಂದರೆ ದುಬಾರಿ ಎಂಬ ಮನೋಭಾವ ಹೋಗಲಾಡಿಸಲು ಗ್ಲೋ ಫೆಸ್ಟ್ ಆಯೋಜಿಸಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಜ್ರಗಳು ಸಿಗುತ್ತಿದ್ದು, ಗುಣಮಟ್ಟದಲ್ಲಿ ಪ್ರಮಾಣೀಕೃತಗೊಂಡಿರುವ ವಜ್ರಾಭರಣ ಮಳಿಗೆಯಲ್ಲಿ ಲಭ್ಯವಿದೆ. ಗ್ಲೋ ಫೆಸ್ಟ್‌ನಲ್ಲಿ ಮಾರಾಟ ಹಾಗೂ ಪ್ರದರ್ಶನಗಳ ಜತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ದರ್ಬೆ ಗಣೇಶ್ ಟ್ರೇಡರ್‍ಸ್‌ನ ಮಾಲೀಕ ವಾಮನ್ ಪೈ ಪತ್ನಿ ಅನುರಾಧ ವಾಮನ್ ಪೈ ಉದ್ಘಾಟಿಸಿದರು. ಉಷಾ ರವೀಂದ್ರ, ಹರಿಣಿ ಸತೀಶ್, ಲಕ್ಷ್ಮೀಕಾಂತ್ ಅಚಾರ್ಯ, ವೇದ ಲಕ್ಷ್ಮೀಕಾಂತ್ ಅಚಾರ್ಯ, ಸುಧನ್ವ ಆಚಾರ್ಯ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕೀರ್ತನ್, ಶೋರೂಮ್ ಮ್ಯಾನೇಜರ್ ಪುರಂದರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಭಾರ್ಗವ್ ಗೋಖಲೆ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ವಿಜಯ, ವೀಣಾ, ಚಂದ್ರಿಕಾ, ಪವಿತ್ರ ಸಹರಿಸಿದರು.
ವಿಶೇಷ ಸಂಗ್ರಹ
ವಜ್ರದ ಆಭರಣಗಳು ಅಸಾಧಾರಣ ಸೌಂದರ್ಯ ಹಾಗೂ ದೀರ್ಘಕಾಲ ಬಾಳಿಕೆಯಿಂದ ಬಹಳ ಅಮೂಲ್ಯ ಆಭರಣವೆಂದು ಪರಿಗಣಿಸಲ್ಪಟ್ಟಿವೆ. ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ೩,೦೦೦ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳು ಆಯ್ಕೆ ಲಭ್ಯವಿವೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಆಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹವಿದೆ.
ರಿಯಾಯಿತಿ, ಕೊಡುಗೆ
ಗ್ಲೋ ವಜ್ರಾಭರಣಗಳು ಅಂತಾರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ಕೃಷ್ಟಶ್ರೇಣಿಯ ವಿ.ವಿ.ಎಸ್., ಎಸ್. ಎಫ್. ಗುಣಮಟ್ಟದ ವಜ್ರಗಳಾಗಿದ್ದು, ಇದು ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಗ್ಲೋ ಫೆಸ್ಟ್‌ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿಕ್ಯಾರೆಟ್‌ಗೆ ೮ ಸಾವಿರ ರೂ.ರಿಯಾಯಿತಿ, ೨೫ ಸಾವಿರ ಮತ್ತು ಅದಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡಗೊರೆ ಪಡೆಯುವ ಸುವರ್ಣವಕಾಶವಿದೆ. ಜನರಿಗೆ ಕೈಗೆಟಕುವ ದರದಲ್ಲಿ ವಜ್ರಾಭರಣಗಳು ಲಭ್ಯವಿದೆ. ೩,೫೦೦ ರೂ.ನಿಂದ ವಜ್ರಾಭರಣದ ಬೆಲೆ ಪ್ರಾರಂಭವಾಗುತ್ತದೆ. ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ, ನೆಕ್ಲೇಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ.