ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಆಕರ್ಷಕ ವಿಶೇಷ ರಿಯಾಯಿತಿ
-
ಪುತ್ತೂರು: ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ಆಯೋಜಿಸಿರುವ ‘ಮುಂಗಾರು ಮೇಳ’ ಕೊನೆಗೊಳ್ಳಲು ಇನ್ನು ಕೇವಲ ಮೂರು ದಿನಗಳು ಬಾಕಿಯಿದ್ದು, ಗ್ರಾಹಕರು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರಾದ ಬಲರಾಮ ಆಚಾರ್ಯ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ೧೫,೦೦೦ರಿಂದ ೧೩,೩೦೦ ರೂ.ಗೆ ಇಳಿಕೆಯಾಗಿರುವುದು ಆಭರಣ ಖರೀದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಇದರೊಂದಿಗೆ ಮುಂಗಾರು ಮೇಳದ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶವನ್ನು ಒದಗಿಸುತ್ತಿದೆ.
ವಿಶೇಷ ರಿಯಾಯಿತಿ: ಮುಂಗಾರು ಮೇಳದ ಅಂಗವಾಗಿ ಆಯ್ದ ಸರಗಳ ತಯಾರಿಕೆ ಶುಲ್ಕದಲ್ಲಿ ಶೇ.೮ರಿಂದ ಹಾಗೂ ಆಯ್ದ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕದಲ್ಲಿ ಶೇ.೧೨ರಿಂದ ಆರಂಭವಾಗುವ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಜೊತೆಗೆ ಇಎಫ್ - ವಿವಿಎಸ್ ಗುಣಮಟ್ಟದ ವಜ್ರಾಭರಣಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಹಳೆಯ ಚಿನ್ನದ ವಿನಿಮಯಕ್ಕೆ ಚಿನ್ನದ ದರದಲ್ಲಿ ಶೇ.೦ ಕಡಿತ ಹಾಗೂ ೯೧೬ ಹಾಲ್‌ಮಾರ್ಕ್ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಅಭಿರುಚಿಗೆ ತಕ್ಕಂತೆ ವಿಶೇಷ ಆಭರಣಗಳ ವಿಶಾಲ ಸಂಗ್ರಹ, ಇಂದಿನ ಟ್ರೆಂಡಿಂಗ್ ಡಿಸೈನ್‌ಗಳ ಅದ್ಭುತ ಕಲೆಕ್ಷನ್‌ಗಳೊಂದಿಗೆ ತಮ್ಮ ಕನಸಿನ ಆಭರಣಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಮುಂಗಾರು ಮೇಳ ಗ್ರಾಹಕರಿಗೆ ಒದಗಿಸುತ್ತಿದೆ.
ಶುಭ ಸಮಾರಂಭಗಳಿಗಾಗಿ ಆಭರಣ ಖರೀದಿಸಲು ಯೋಜಿಸಿರುವವರಿಗೆ ಈ ಮೇಳ ಅತ್ಯುತ್ತಮ ಅವಕಾಶವಾಗಿದೆ. ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡುಬಿದಿರೆ ಶಾಖೆಗಳಲ್ಲಿ ನಡೆಯುತ್ತಿರುವ ಈ ಮೇಳಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.