

ಗೋಣಿಕೊಪ್ಪಲು:
ಕಾವೇರಿ ಮಹಿಳಾ ಸಮಾಜದ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ 11ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಇದೇ ವೇಳೆ ವಿದ್ಯಾರ್ಥಿಗಳಿಗೆ 40ಕ್ಕೂ ಹೆಚ್ಚು ಯೋಗ ಮ್ಯಾಟ್‌ಗಳನ್ನು ಗೋಣಿಕೊಪ್ಪಲು ನಗರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ ನೇತೃತ್ವದಲ್ಲಿ ವಿತರಿಸಲಾಯಿತು. ಯೋಗದ ಮಹತ್ವದ ಬಗ್ಗೆ ಮುಖ್ಯ ಶಿಕ್ಷಕ ಮಹೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಯೋಗ ತರಬೇತುದಾರ ಮಧು ಮಾಚಯ್ಯ ಮಕ್ಕಳಿಗೆ ಯೋಗ ತರಬೇತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಕೆ. ರಾಜಶೇಖರ್, ಗೀತಾ, ಶಿಕ್ಷಕರುಗಳಾದ ಚಂದನ ಮಂಜುನಾಥ್, ಪಾಣತಲೆ ಹರಿಣಿ, ರೇವತಿ, ವಿದ್ಯಾ ಮಂಜುಳಾ, ಚೇತನ್, ಆಗ್ನೇಶ್, ಕರಿಯಪ್ಪ, ಸುಮಿ, ಅನಿಲ್, ಕಾರ್ತಿಕ್ ಮಕ್ಕಳೊಂದಿಗೆ ಯೋಗ ಮಾಡಿ ದಿನಾಚರಣೆಯ ಮಹತ್ವವನ್ನು ಸಾರಿದರು.