ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ವಿಶೇಷ ಪ್ರಶಸ್ತಿ

GK LAW
Published on

ಹುಬ್ಬಳ್ಳಿ: ಬೆಂಗಳೂರಿನ ಅಲ್ ಅಮೀನ ಕಾನೂನು ಕಾಲೇಜ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಕೆಎಲ್​ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಬೈಲಪ್ಪ ಬೆಳಗಲ್, ಮಲ್ಲಿಕಾ ನೆಲಿವಿಗಿ ಹಾಗೂ ಜೆಬಾ ಮುಲ್ಲಾ ಅತ್ಯುತ್ತಮ ವಾದ ಪತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬೆಂಗಳೂರಿನ ಬಿ.ಎಂ.ಎಸ್. ಕಾನೂನು ಕಾಲೇಜ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಇದೇ ಕಾಲೇಜಿನ ಮಣಿಕಂಠ ಹಳ್ಳೂರು ಅತ್ಯುತ್ತಮ ಸಂಶೋಧನೆಕಾರ ಪ್ರಶಸ್ತಿ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net