ಮಕ್ಕಳಿಗೆ ಸಂಸ್ಕಾರ ನೀಡುವುದೂ ದೇಶ ಸೇವೆ

Giving rituals to children is also a service to the country.
ರಬಕವಿ-ಬನಹಟ್ಟಿ ಸಮಿಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನಮುನಿ ಆಚಾರ್ಯ ಶ್ರೀ ಕುಲರತ್ನ ಭೂಷಣ ಮಹಾರಾಜರ ಚಾತುರ್ಮಾಸದ ನಿಮಿತ್ತ ಹಮ್ಮಿಕೊಂಡ ಮಕ್ಕಳಿಗೆ ಸಂಸ್ಕಾರ ಶಿಬಿರದಲ್ಲಿ ಮಕ್ಕಳು ಜಿನಬಿಂಬಗಳಿಗೆ ಅಭಿಷೇಕ ಹಾಗೂ ಮಂತ್ರೋಪದೇಶಗಳನ್ನು ಮಾಡಿದರು.
Published on

ರಬಕವಿ-ಬನಹಟ್ಟಿ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿನ ವೈಪರೀತ್ಯಗಳನ್ನು ಸರಿಪಡಿಸಲು, ಧರ್ಮದ ರಕ್ಷಣೆಗೆ ಅಣಿಗೊಳಿಸಲು ಮುಂಬರುವ ಪೀಳಿಗೆ ಸುಸಂಸ್ಕೃತರನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದು ದೇಶ ಸೇವೆಯ ಭಾಗವಾಗಿದೆ ಎನ್ನುವುದು ಮರೆಯಬಾರದು ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನಮುನಿ ಆಚಾರ್ಯ ಕುಲರತ್ನಭೂಷಣ ಮಹಾರಾಜರು ಹೇಳಿದರು.

ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಭಾನುವಾರ ಚಾತುರ್ಮಾಸದ ನಿಮಿತ್ತ ಹಮ್ಮಿಕೊಂಡ ಮಕ್ಕಳಿಗೆ ಸಂಸ್ಕಾರ ಶಿಬಿರದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಧರ್ಮದ ಆಚಾರ ವಿಚಾರ ಹಾಗೂ ಅನೇಕ ಅಭಿಷೇಕದ ವಿಚಾರಗಳನ್ನು ತಿಳಿಸಿಕೊಡುವುದು ಮುಂದಿನ ಪೀಳಿಗೆಗೆ ಒಂದು ಮಾರ್ಗದರ್ಶನವಾದಂತೆ. ಮೊಬೈಲ್ ಯುಗದಲ್ಲಿ ಇಂಥ ಧರ್ಮದ ಕಾರ್ಯದಲ್ಲಿ ಒಂದು ಗಂಟೆಗೂ ಅಧಿಕ ಸಮಯ ಆಧ್ಯಾತ್ಮಿಕ ಚಿಂತನೆಯಲ್ಲಿ ಕಳೆಯುವುದರಿಂದ ಮಕ್ಕಳಲ್ಲಿ ಮಾನಸಿಕವಾಗಿ ತುಂಬ ಬದಲಾವಣೆಯಾಗುತ್ತದೆ. ಅಧ್ಯಾತ್ಮಕ್ಕೆ ಇರುವ ಶಕ್ತಿ ಮತ್ತಾವುದಕ್ಕೂ ಇಲ್ಲ. ಸಾಧನೆ ಮಾಡಬೇಕೆನ್ನುವವರು ಧರ್ಮ, ಜ್ಞಾನ, ಯೋಗ, ಆಹಾರ ಪದ್ಧತಿ ಸರಿಯಾಗಿ ಅಳವಡಿಸಿಕೊಂಡರೆ ಅವರ ಬದುಕು ಸುಂದರ ಮತ್ತು ಸಾರ್ಥಕವಾಗಿರುತ್ತದೆ ಎಂದು ಹೇಳಿದರು.

ಸಂಸ್ಕಾರ ಶಿಬಿರದಲ್ಲಿ ರಾಜ್ಯ ಮತ್ತು ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ನೂರಾರು ಮಕ್ಕಳು ಭಾಗವಹಿಸಿದ್ದರು. ಶ್ರಾವಕ ಶ್ರಾವಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net