ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಿ

19 DVD 04
ನರಸಣ್ಣ
Published on

ದೇವದುರ್ಗ: ರಾಜ್ಯದಲ್ಲಿ ಕುರಿಗಳ ಕಳ್ಳತನ, ಕುರಿಗಾಹಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಬಾಗಲಕೋಟೆ ಪೊಲೀಸ್ ಇಲಾಖೆ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡುತ್ತಿದೆ.

ಯೋಜನೆ ಎಲ್ಲ ಜಿಲ್ಲೆಗೂ ವಿಸ್ತರಿಸಿ ಕುರಿಗಾಹಿಗಳಿಗೆ ತರಬೇತಿ ನೀಡಬೇಕು ಎಂದು ಕುರುಬರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನರಣ್ಣ ನಿಲವಂಜಿ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕುರಿಗಾಹಿಗಳಿಗೆ ರಕ್ಷಣೆ ನೀಡಲು ಸರ್ಕಾರ ಬಂದೂಕು ಪರವಾನಗಿ ನೀಡುತ್ತಿರುವುದು ಸ್ವಾಗತಾರ್ಹ. ಇದರ ಭಾಗವಾಗಿ ಬಾಗಲಕೋಟೆ ಪೊಲೀಸ್ ಇಲಾಖೆ 400 ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡುತ್ತಿರುವುದು ಶ್ಲಾಘನೀಯ.

ಎಲ್ಲ ಜಿಲ್ಲೆಯಲ್ಲಿ ತರಬೇತಿ ನೀಡಿ ಬಂದೂಕು ಪರವಾನಗಿ ನೀಡಬೇಕು. ಕುರಿಗಾಹಿಗಳಿಗೆ ವಿಶೇಷ ಯೋಜನೆ ರೂಪಿಸಬೇಕು. ಕುರಿ ಸತ್ತರೆ ವೈಜ್ಞಾನಿಕ ಪರಿಹಾರ, ಕುರಿಗಾಹಿ ಮೃತಪಟ್ಟರೆ ಸೂಕ್ತ ಪರಿಹಾರ ನೀಡಬೇಕು. ಕುರಿಗಾಹಿಗಳ ಮೇಲೆ ಆಗುತ್ತಿರುವ ಹಲ್ಲೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net