ದುಡಿಮೆಯ ಪಾಲು ಸಮಾಜಕ್ಕೂ ನೀಡಿ

07 MDG 1
Published on

ಮುಂಡರಗಿ: ಎಲ್ಲರೂ ಒಗ್ಗಟ್ಟಾಗಿ ಇದ್ದು ಎಲ್ಲರ ಜತೆ ಸಹಕಾರ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಮೊಹಮ್ಮದ್ ಪೈಗಂಬರ್ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ದುಡಿಯುವ ಹಣದಲ್ಲಿ ಒಂದಷ್ಟು ಭಾಗ ಸಮಾಜದ ಸೇವೆಗೆ ಮೀಸಲಿಡಬೇಕು ಮುಸ್ಲಿಂ ಧರ್ಮಗುರು ಖಾದರಸಾಬ್ ಮುಲ್ಲಾ ಹೇಳಿದರು.

ತಾಲೂಕಿನ ಡಂಬಳ ಗ್ರಾಮದ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಶನಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿದರು. ಪ್ರಮುಖರಾದ ಅಂಜುಮನ್ ಕಮಿಟಿ ಅಧ್ಯಕ್ಷ ಬಶೀರ ಅಹ್ಮದ್ ತಾಂಬೋಟಿ, ಕಾರ್ಯದರ್ಶಿ ಖಾಜಾ ಹುಸೇನ ಹೋಸಪೇಟಿ, ಹುಸೇನಸಾಬ್ ಹೊಸಬಾವಿ, ರಾಯಸಾಬ್ ಕಾಸ್ತಾರ, ಬಾಬುಸಾಬ್ ಮೂಲಿಮನಿ, ಮಹಮ್ಮದ ರಪೀಕಸಾಬ್ ಹೊಸಪೇಟೆ, ಜಂದಿಸಾಬ್ ಸರಕಾವಾಸ, ಜಾಕೀರ ಮೂಲಿಮನಿ, ಬಾಬುಸಾಬ್ ಸರಕಾವಾಸ, ಹುಸೇನಸಾಬ್ ದೊಡ್ಡಮನಿ, ಶಫೀಕ ಮೂಲಿಮನಿ, ಬುಡ್ನೇಸಾಬ್ ಅತ್ತಾರ, ಚಾಂದಬಾಸಾ ಸರಕಾವಾಸ, ಮುರ್ತುಜಾ ಮನಿಯಾರ, ಎಂ.ಆರ್. ಆಲೂರ, ನೂರಹಮ್ಮದ್ ಸರಕಾವಾಸ, ರಜಾಕಸಾಬ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net