ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

12mdl04
ಮುದಗಲ್‌ನಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯನ್ನು ಡಿಡಿಪಿಐ ಕೆ.ಬಿ.ಬಡಿಗೇರ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ಬಾಲಚಂದ್ರ ದಾಸರ್, ಸಿಆರ್‌ಪಿ ರಾಮಚಂದ್ರ ಢವಳೆ, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಇತರರಿದ್ದರು.
Published on

ಮುದಗಲ್: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ಶೈಕ್ಷಣಿಕ ಬೆಳವಣಿಗೆಗೆ ಪಾಲಕರು ಸಹಕರಿಸಬೇಕು ಎಂದು ಡಿಡಿಪಿಐ ಕೆ.ಬಿ.ಬಡಿಗೇರ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮಕ್ಕಳ ಪಾಲಕರ ಸಭೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು.

ಮಕ್ಕಳಿಗಾಗಿ ಪಾಲಕರು ಆಸ್ತಿ ಮಾಡದೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಅನೇಕ ವೇದಿಕೆಗಳಿದ್ದು, ಮಕ್ಕಳು ಆತ್ಮಸೈರ್ಯದಿಂದ ಸ್ಪರ್ಧಾ ಮನೋಭಾವದಿಯಿಂದ ಪಾಲ್ಗೊಳ್ಳಬೇಕು ಎಂದರು.

ಬಿಇಒ ಹುಂಬಣ್ಣ ರಾಠೋಡ, ಎಸ್ಡಿಎಂಸಿ ಅಧ್ಯಕ್ಷ ಸಿದ್ರಾಮಪ್ಪ, ಪ್ರಮುಖರಾದ ಚಿನ್ನಪ್ಪ ಪತ್ತಾರ, ಪ್ರಭುಲಿಂಗ ಗದ್ದಿ, ಮಲ್ಲಪ್ಪ ಪಾಟೀಲ್, ಭಾಗ್ಯಲಕ್ಷ್ಮೀ, ಸೌಮ್ಯ ಹಣಗಿ, ಶಂಕರಗೌಡ, ಸುಜಿತ್, ಆನಂದ, ಯಾಸ್ಮೀನ್ ಬಾನು, ವಿಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net