ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ

Give value based education to children
ಬೀಳಗಿ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆದ ಡಾ. ಎಸ್. ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ, ನಿರ್ದೇಶಕ ಆರ್.ಈ.ಪಾಟೀಲ, ಆಡಳಿತಾಧಿಕಾರಿ ಶಂಕರಗೌಡ ಆರ್. ಪಾಟೀಲ, ಸಿಬಿಎಸ್‌ಇ ಪ್ರಾಚಾರ್ಯ ಡಿ.ಎಸ್. ಕುಂಠೆ ಇದ್ದ
Published on

ಬೀಳಗಿ: ಮಕ್ಕಳ ಮನಸ್ಸಲ್ಲಿ ಅಕ್ಷರ ಬಿತ್ತಿ ಅವರ ಭವಿಷ್ಯಕ್ಕೆ ಬೆಳಕು ಚೆಲ್ಲುವ ಶಿಲ್ಪಿಗಳು ಶಿಕ್ಷಕರು ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.

ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆದ ಡಾ. ಎಸ್. ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಪ್ರತಿಯೊಬ್ಬರ ಅಮೂಲ್ಯ ಆಸ್ತಿ. ಶಿಕ್ಷಕ ವೃತ್ತಿಗೆ ನಮ್ಮ ದೇಶದಲ್ಲಿ ಮಾತ್ರ ಉನ್ನತ ಸ್ಥಾನಮಾನವಿದೆ. ಬೇರೆ ಬೇರೆ ವಿಷಯದಲ್ಲಿ ಏನಾದರೂ ಎಡವಿದರೆ ಅದನ್ನು ಸರಿಪಡಿಸಬಹುದು. ಆದರೆ, ಶಿಕ್ಷಣ ರಂಗದಲ್ಲಿ ಎಡವಿದರೆ ಇಡೀ ಸಮಾಜವೇ ಎಡವಿದಂತೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಜತೆಗೆ ಮೌಲ್ಯಾಧಾರಿತ ಶಿಕ್ಷಣದ ಮಾರ್ಗದರ್ಶನ ನೀಡಬೇಕು ಎಂದರು.

ಸಂಸ್ಥೆ ನಿರ್ದೇಶಕ ಆರ್. ಈ. ಪಾಟೀಲ, ಆಡಳಿತಾಧಿಕಾರಿ ಶಂಕರಗೌಡ ಆರ್. ಪಾಟೀಲ, ಸಿಬಿಎಸ್‌ಇ ಪ್ರಾಚಾರ್ಯ ಡಿ.ಎಸ್. ಕುಂಠೆ, ಪಿ.ಯು. ಕಾಲೇಜಿನ ನಿರ್ದೇಶಕ ಜಿ. ಎಸ್. ಬಿರಾದಾರ, ಪಿ.ಯು. ಕಾಲೇಜಿನ ವಿಜ್ಞಾನ ವಿಭಾಗದ ಪ್ರಾಚಾರ್ಯ ಐ.ಬಿ.ಪೂಜಾರ, ವಾಣಿಜ್ಯ ವಿಭಾಗದ ಪ್ರಾಚಾರ್ಯ ಜಿ.ಆರ್. ಪಾಟೀಲ, ಮಲ್ಲಿಕಾರ್ಜುನ ಅಬ್ಬಗೇರಿ ಹಾಗೂ ಬಿ.ಆರ್. ಗಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net