ಮಕ್ಕಳಿಗೆ ಮೌಲ್ಯಯುತ ಶಿಕ್ಷಣ, ಸಂಸ್ಕಾರ ನೀಡಿ

Give valuable education and culture to children
ಬೀಳಗಿ ತಾಲೂಕಿನ ಬಾಡಗಂಡಿಯ ಮಾತ್ರೋಶ್ರೀ ಈರಮ್ಮ ತಾಯಿ ರುದ್ರಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶೆ ಆರತಿ ಬಿ. ಕಮತೆ ಮಾತನಾಡಿದರು. ಬಿಇಒ ಆರ್.ಎಸ್. ಆದಾಪೂರ ಇದ್ದರು.
Published on

ಬೀಳಗಿ: ಮಕ್ಕಳು ಮೌಲ್ಯಯುತ ಶಿಕ್ಷಣ ಹಾಗೂ ಒಳ್ಳೆಯ ಸಂಸ್ಕಾರ ಪಡೆಯುವ ಜತೆಗೆ ಕಾನೂನಿನ ಅರಿವು ಪಡೆದುಕೊಳ್ಳಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶೆ ಆರತಿ ಬಿ. ಕಮತೆ ಹೇಳಿದರು.

ತಾಲೂಕಿನ ಬಾಡಗಂಡಿಯ ಮಾತ್ರೋಶ್ರೀ ಈರಮ್ಮ ತಾಯಿ ರುದ್ರಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆದು ಹೆತ್ತವರಿಗೆ ಹಾಗೂ ಸುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ಕಾನೂನು ಪ್ರಾಧಿಕಾರವು ಕೋರ್ಟಿನಲ್ಲಿರುವ ಕೆಲ ವ್ಯಾಜ್ಯಗಳು, ಲೋಕ ಅದಾಲತ್‌ಗಳಲ್ಲಿ ಉಚಿತವಾಗಿ ಪರಿಹಾರ ಪಡೆದುಕೊಳ್ಳುವುದು. ಬಡವರಿಗೆ ಹಾಗೂ ಆರ್ಥಿಕವಾಗಿ ನೊಂದವರೂ ತಮಗೆ ಯಾವುದೇ ರೀತಿಯಲ್ಲಿ ಅನ್ಯಾಯವಾದಾಗ ಕಾನೂನು ಸೇವಾ ಸಮಿತಿ ಗಮನಕ್ಕೆ ತಂದರೆ ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ಕೆಲಸವನ್ನು ಮಿತಿ ಮಾಡಲಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರಲ್ಲಿ ಕಾನೂನಿನ ಅರಿವು ಮತ್ತು ನೆರವು ಪಡೆದುಕೊಂಡು ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಮುನ್ನಡೆಯಬೇಕಾಗಿದೆ. ಮಕ್ಕಳ ಕಲಿಕೆಗೆ ಸರ್ಕಾರವು ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಅವುಗಳ ಪ್ರಯೋಜನ ಪಡೆದುಕೊಂಡು ಶಿಕ್ಷಣ ಹಾಗೂ ಇತರೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.

ಅಪರ ಸರ್ಕಾರಿ ವಕೀಲ ಎಸ್.ವೈ. ಪಾಟೀಲ, ನ್ಯಾಯವಾದಿ ಎಸ್.ಎಸ್. ಟಕ್ಕಳಕಿ, ಶಾಲಾ ಮುಖ್ಯಶಿಕ್ಷಕಿ ಕೆ.ಬಿ. ಬಿಳೇಭಾವಿ, ಶಿಕ್ಷಕರಾದ ಎಲ್.ಎಲ್. ಪೂಜಾರಿ, ವಿ.ಎಂ. ಜಡರಾಮಕುಂಟೆ, ಎ.ಡಿ. ಮಾದರ, ಸಿ.ಬಿ. ಹೂಗಾರ, ಎಚ್.ಜಿ. ತಿಪ್ಪರಡ್ಡಿ, ವೈ.ಎಸ್. ಕೊಪ್ಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net