ತುಮಕೂರು: ನಮಗೂ ಶಾಸನಬದ್ಧ ಹಕ್ಕು ನೀಡಿ

https://www.vijayavani.net/tumkur-cadre-based-touch-for-jds
2
Published on

ಜಿಲ್ಲಾಮಟ್ಟದ ಸಮ್ಮೇಳನದಲ್ಲಿ ಆಶಾ ಕಾರ್ಯಕರ್ತೆಯರ ಒತ್ತಾಯ

ತುಮಕೂರು: ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಅಲ್ಲಿಯವರೆಗೂ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಎಲ್ಲ ಶಾಸನಬದ್ಧ ಹಕ್ಕುಗಳನ್ನು ಒದಗಿಸಬೇಕು ಎಂಬ ಘೋಷಣೆಗಳೊಂದಿಗೆ ಶುಕ್ರವಾರ ನಗರ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಿದರು.


ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿಡಿಪಿಯು ಕೆ.ದೊರೈರಾಜು, ದುಡಿಯುವ ವರ್ಗದ ಇತಿಹಾಸ ಬಹಳ ಧೀರ್ಘವಾದದ್ದು, ಹೋರಾಟಗಳು ಅನ್ಯಾಯಗಳ ವಿರುದ್ಧ, ಸಮಾನತೆಗಾಗಿ, ದುಡಿಯುವ ಪರಿಸ್ಥಿತಿಯ ಸುಧಾರಣೆಗಾಗಿ ಚಳವಳಿ ಕಟ್ಟಿಕೊಂಡು ಬರುತ್ತಿದ್ದಾರೆ. ಅದರ ಫಲವಾಗಿ ಅಲ್ಪ ಸ್ವಲ್ಪ ಸೌಲಭ್ಯಗಳು ದೊರೆಯುತ್ತಿವೆ ಎಂದರು.


ಕೇಂದ್ರ ಸರ್ಕಾರ ಜನರ ಬದುಕಿನ ತೀರ್ವ ದಾಳಿ ನಡೆಸಿದ್ದು, ಎಲ್ಲ ಸಾಮಾಜಿಕ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಇಪಿಎಫ್​, ಇಎಸ್​ಐ ಯಂತ ಸೌಲಭ್ಯಗಳು ಕಾರ್ಮಿಕರ ಖಾತೆಗೆ ಜಮಾ ಆಗುವುದೇ ಕಷ್ಟ. ಆ ಸೌಲಭ್ಯಗಳ ಮೇಲೂ ಕತ್ತರಿ ಹಾಕಲಾಗಿದೆ. ಇನ್ನು ಬಿಡಿಗಾಸುಕೊಟ್ಟು ಕಡಿಮೆ ವೇತನ ಹೆಚ್ಚಿನ ಕೆಲಸದ ಹೊರೆಯನ್ನು ಎಲ್ಲೆಡೆ ಹೇರಲಾಗುತ್ತಿದೆ. ಆಶಾ ಕಾರ್ಯಕರ್ತೆಯರಾದ ನಿಮ್ಮನ್ನು ಪ್ರೋತ್ಸಾಹಧನದ ಹೆಸರಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡು ಇಲಾಖೆಯ ಎಲ್ಲ ಕೆಲಸಗಳ ಜವಾಬ್ದಾರಿ ಹೊರಿಸುವುದು ಸರಿಯಲ್ಲ. ಈ ಪರಿಸ್ಥಿತಿ ಸರಿಹೋಗಲು ಒಗ್ಗಟ್ಟಿನ ಹೋರಾಟ ಮಾಡಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.


ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನ ಸೆ.13,14ರಂದು ಕಲಬುರ್ಗಿಯಲ್ಲಿ ಸಂಘಟಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ಈ ಸಮ್ಮೇಳನದಲ್ಲಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ನಾವು ವಿಧಾನಸಭೆಗೆ ಮುತ್ತಿಗೆ ಚಳವಳಿಗೆ ಮುಂದಾಗುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ಕನಿಷ್ಠ ವೇತನ 15000 ನಿಗದಿ ಮಾಡಬೇಕು ಹಾಗೂ ಕಾರ್ಮಿಕರೆಂದು ಪರಿಗಣಿಸಬೇಕು. ಆರೋಗ್ಯ ಸೌಲಭ್ಯಗಳನ್ನು ನೀಡುವುದು ಸೇರಿ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಲ್ಲ ಕಡೆ
ಸಮ್ಮೇಳನಗಳು ನಡೆಯುತ್ತಿವೆ ಎಂದರು.
ಅಖಿಲ ಭಾರತ ಮಹಿಳಾ ಸಾಂಸತಿಕ ಸಂಘಟನೆಯ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಕಲ್ಯಾಣಿ ಮಾತನಾಡಿ, ಮಹಿಳೆಯರ ಮೇಲೆ ಇಂದು ಅವ್ಯಾಹತವಾಗಿ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದು, ಕುಸಂಸತಿ ಹೆಚ್ಚುತ್ತಿದೆ. ಅಶ್ಲೀಲ ಸಿನಿಮಾ, ಸಾಹಿತ್ಯಗಳಿಂದ ಯುವಜನರ ನೈತಿಕ ಬೆನ್ನೆಲುಬನ್ನು ಆಳುವ ಬಂಡವಾಳಶಾಹಿ ವ್ಯವಸ್ಥೆ ಸೃಷ್ಟಿಸಿದ್ದು, ದುಡಿಯುವ ಮಹಿಳೆಯರ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ದುಡಿಯುವ ಮಹಿಳೆಯರು ಹೊರಗು ಮನೆಯೊಳಗು ಕೆಲಸ ನಿರ್ವಹಿಸುತ್ತಾರೆ. ಇಂತಹ ಮಹಿಳೆಯರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ನಾವು ಒಳ್ಳೆಯ ಸಮಾಜವನ್ನು ಹೋರಾಟ ಮೂಲಕ
ಕಟ್ಟಬೇಕು ಎಂದು ಹೇಳಿದರು.
ಆಶಾ ಸಂಘದ ಜಿಲ್ಲಾ ಸಂಚಾಲಕಿ ಮಂಜುಳಾ ಗೋನವಾರ ಮಾತನಾಡಿ, ಮಹಿಳೆಯರು ಕೌಟುಂಬಿಕ ಜವಾಬ್ದಾರಿಗಳೊಂದಿಗೆ, ಸಾಮಾಜಿಕ ಜವಾಬ್ದಾರಿಯನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುವರು ಸಾಕಷ್ಟು ಅಡೆತಡೆ ಅವಮಾನ ಅನ್ಯಾಯ ಎದುರಿಸಿ ಕೆಲಸ ಮಾಡುತ್ತಾರೆ. ಅಂತಹ ಗುಂಪಿಗೆ ಆಶಾ ಕಾರ್ಯಕರ್ತೆಯರು ಸೇರುತ್ತಾರೆ. ಕರೊನಾ ಸಂದರ್ಭದಲ್ಲಿ ಅವರಿಗಾದ ಒತ್ತಡ ಮತ್ತು ಕಷ್ಟಗಳನ್ನು ಹೇಳಿಕೊಳ್ಳುವ ಪರಿಸ್ಥಿತಿ ಇರಲಿಲ್ಲ. ಅಂತಹ ಪ್ರಾಣಪಾಯದ ಕೆಲಸ ನಿರ್ವಹಿದ ಅವರನ್ನು ಗೌರವಿಸಬೇಕು ಅವರಿಗೆ ವಿಶೇಷ ಪ್ರೋತ್ಸಾಹ ಧನ ಕೊಡಬೇಕು ಎಂದರು. ಈ ಸಮ್ಮೇಳನದಲ್ಲಿ ದುಡಿಯುವ ಮಹಿಳೆಯರ ಮುಖ್ಯ ಗೊತ್ತುವಳಿಯನ್ನು, ಸಂಘಟನಾತ್ಮಕ ಗೊತ್ತುವಳಿಯನ್ನು ಮತ್ತು ಕಲ್ಕತ್ತಾದ ವೈದ್ಯೆಯ ಮೇಲೆ ನಡೆದ ಘೋರ ಘಟನೆಯನ್ನು ಖಂಡಿಸಿ ಗೊತ್ತುವಳಿ ಮಂಡಿಸಲಾಯಿತು. ಸಮ್ಮೇಳದ ಪೂರ್ವದಲ್ಲಿ ಬಿಜಿಎಸ್​ ವೃತ್ತದಿಂದ ಗುಬ್ಬಿ ವೀರಣ್ಣ ರಂಗಮಂದಿರದವರೆಗೂ ಆಶಾ ಕಾರ್ಯಕರ್ತೆಯರು ಮೆರವಣಿಗೆ ನಡೆಸಿದರು.

ನೂತನ ಸಮಿತಿ ಆಯ್ಕೆ: ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಮಂಜುಳಾ ಗೋನವಾರ, ಅಧ್ಯಕ್ಷರಾಗಿ ಎಂ.ಆರ್​.ನಿರ್ಮಲಾ, ಕಾರ್ಯದರ್ಶಿ ರೇಖಾ, ಉಪಾಧ್ಯಕ್ಷರಾಗಿ ವಿನೋದಾ, ಮೀನಾಕ್ಷಿ, ಶಾರದಮ್ಮ, ಲಲಿತಮ್ಮ, ಗಿರಿಜಮ್ಮ, ಕಮಲಾ, ಎಚ್​.ಎಸ್​.ಲತಾ, ಎಸ್​.ನಾಗರತ್ನಮ್ಮ, ಪುಷ್ಪಾ, ಜಂಟಿ ಕಾರ್ಯದಶಿಗಳಾಗಿ ಜಯಲಕ್ಷಿ$್ಮ, ಗಾಯತ್ರಿ, ಸಾವಿತ್ರಮ್ಮ, ಪ್ರೇಮಾ, ಧನಲಕ್ಷಿ$್ಮ ಸೇರಿದಂತೆ ಇಪ್ಪತ್ತು ಜನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಪ್ಪತ್ತು ಜನ ಕೌನ್ಸಿಲ್​ ಸಲಹೆಗಾರರಾಗಿ ಎಂ.ವಿ.ಕಲ್ಯಾಣಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net