ತೇರದಾಳ ಮತಕ್ಷೇತ್ರಕ್ಕೆ ಸ್ಥಳೀಯ ನಾಯಕರಿಗೇ ಟಿಕೆಟ್ ನೀಡಿ : ಹಲವು ಮುಖಂಡರಿಂದ ಹೈಕಮಾಂಡ್​ಗೆ ಒತ್ತಾಯ

MLP-30-1 CONGRESS SABHE
ಮಹಾಲಿಂಗಪುರದ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ತೇರದಾಳ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಡಾ. ಎ.ಆರ್. ಬೆಳಗಲಿ, ಸಿದ್ದು ಕೊಣ್ಣೂರ, ಡಾ.ಪದ್ಮಜಿತ ನಾಡಗೌಡ ಇತರರಿದ್ದರು.
Published on

ಮಹಾಲಿಂಗಪುರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೇರದಾಳ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್‌ಅನ್ನು ಸ್ಥಳೀಯರಿಗೆ ನೀಡುವಂತೆ ಮುಖಂಡರು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

ಪಟ್ಟಣದ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಡಾ. ಎ.ಆರ್. ಬೆಳಗಲಿ, ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ, ಡಾ.ಪದ್ಮಜಿತ ನಾಡಗೌಡ ಮಾತನಾಡಿ, ಇಲ್ಲಿಯ ಜನರ ನಾಡಿಮಿಡಿತ ಅರಿತು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಸ್ಥಳೀಯರೇ ಆಗಬೇಕು. ಅದರಿಂದ ಜನರು, ಕಾರ್ಯಕರ್ತರ ಸಮಸ್ಯೆ ಆಲಿಸಿ, ಪರಿಹಾರ ನೀಡಲು ವರ್ಷದ 365 ದಿನವೂ ಸಾಧ್ಯವಾಗಲಿದೆ. ಇದು ಈ ಭಾಗದ ಪಕ್ಷದ ಕಾರ್ಯಕರ್ತರ ಬಹಳ ವರ್ಷಗಳ ಮೊರೆಯಾಗಿದೆ. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಲು ಕಾಂಗ್ರೆಸ್ ಮುಖಂಡರ ಸಮಿತಿ ರಚಿಸಲಾಗುವುದು ಎಂದರು.

ಸ್ಥಳೀಯವಾಗಿ ಯಾರಿಗೇ ಟಿಕೆಟ್ ನೀಡಿದರೂ ಕ್ಷೇತ್ರದ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು. ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 2 ಬಾರಿ ಸೋತಿದ್ದು, ಒಮ್ಮೆ ಮಾತ್ರ ಗೆಲುವು ಕಂಡಿದೆ. ಆ ಗೆಲುವಿಗೂ ಕೆಜೆಪಿ ಚುನಾವಣೆ ಕಣದಲ್ಲಿದ್ದುದ್ದರಿಂದ ಕಾಂಗ್ರೆಸ್‌ಗೆ ವರವಾಯಿತೇ ಹೊರತು ಕಾಂಗ್ರೆಸ್ ಗೆಲ್ಲುವ ಹಂತದಲ್ಲಿರಲಿಲ್ಲ ಎಂದರು.

ಮುಖಂಡರಾದ ಯಲ್ಲನಗೌಡ ಪಾಟೀಲ, ಎಸ್.ಎಂ. ಉಳ್ಳೇಗಡ್ಡಿ, ರಂಗನಗೌಡ ಪಾಟೀಲ, ರಾಜು ನಂದೆಪ್ಪನವರ, ಪ್ರವೀಣ ನಾಡಗೌಡ ಮಾತನಾಡಿದರು. ಶಂಕರ ಸೋರಗಾಂವಿ, ಭೀಮಶಿ ಪಾಟೀಲ, ದುಂಡಪ್ಪ ಕರಿಗಾರ, ಸಾಗರ ಚವಜ, ಮಾಳು ಹಿಪ್ಪರಗಿ, ನಿಲೇಶ ದೇಸಾಯಿ, ರವಿ ಬಾಡಗಿ, ಶಿವಲಿಂಗ ನಿರ್ವಾಣಿ, ಸುನೀಲಗೌಡ ಪಾಟೀಲ, ಸುರೇಶಗೌಡ ಪಾಟೀಲ, ಮಲ್ಲಪ್ಪ ಯರಗುದ್ರಿ, ಬರಮು ಉಳ್ಳಾಗಡ್ಡಿ, ಪ್ರಕಾಶ ಮುಳ್ಳಣ್ಣವರ, ಮುತ್ತಪ್ಪ ಕೊಕಟನೂರ, ಅನಿಲ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net